ಮಂಡ್ಯ: ಕೆ.ಆರ್.ಎಸ್. ಡ್ಯಾಂ ಮೇಲೆ ಯುವಕನಿಗೆ ಪೊಲೀಸ್ ವಾಹನ ಚಲಾಯಿಸಲು ಅವಕಾಶ ನೀಡಿದ ಭದ್ರತಾ ವಿಭಾಗದ ಇನ್ಸ್ ಪೆಕ್ಟರ್ ರನ್ನು ಅಮಾನತು ಮಾಡಲಾಗಿದೆ.
ಕೆ.ಆರ್.ಎಸ್. ಡ್ಯಾಂ ಮೇಲೆ ಸಾರ್ವಜನಿಕರಿಗೆ ನಿಷೇಧವಿದ್ದು, ನಿರ್ಬಂಧವಿದ್ದಾಗ್ಯೂ ಕೂಡ ಪೊಲಿಸರಿಂದಲೇ ನಿಯಮ ಉಲ್ಲಂಘನೆಯಾಗಿದೆ. ಭದ್ರತೆ ನೋಡಿಕೊಳ್ಳಬೇಕಿದ್ದ ಇನ್ಸ್ ಪೆಕ್ಟರ್ ಎಸ್.ಬಿ.ಸ್ವಾಮಿ ಯುವಕನ ಮೋಜು ಮಸ್ತಿಗಾಗಿ ಡ್ಯಾಂ ಮೇಲೆ ವಾಹನ ಚಲಾಯಿಸಲು ಪೊಲೀಸ್ ವಾಹನವನ್ನೇ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಪೊಲೀಸ್ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಇನ್ಸ್ ಪೆಕ್ಟರ್ ಎಸ್.ಬಿ.ಸ್ವಾಮಿಯವರನ್ನು ಅಮಾನತು ಮಾಡಲಾಗಿದೆ.
Laxmi News 24×7