ಬೆಂಗಳೂರು: ರಾಜ್ಯದಲ್ಲಿ ಮಧ್ಯಾಹ್ನ ನಿಷೇಧಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಿರಿಗೆರೆ ತರಳಬಾಳು ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪತ್ರ ಬರೆದು ಒತ್ತಾಯಿಸಿದ್ದಾರೆ.
ಮದ್ಯದ ದಾಸರಾಗಿ ರಾಜ್ಯದ ಗ್ರಾಮೀಣ ಪ್ರದೇಶದ ಬಡವರು, ದಲಿತರು, ಮಧ್ಯಮವರ್ಗದ ಕುಟುಂಬದವರು ನಿತ್ಯ ನರಕ ಅನುಭವಿಸುವಂತಾಗಿದೆ. ಹೀಗಾಗಿ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಿಸುವಂತೆ ಶ್ರೀಗಳು ಒತ್ತಾಯಿಸಿದ್ದಾರೆ.
ಮದ್ಯಪಾನದಂತಹ ಅನಿಷ್ಟದಿಂದ ನಾಡಿನ ಪರಂಪರೆಗೆ ಪೆಟ್ಟು ಬೀಳುತ್ತಿದೆ. ಮದ್ಯವ್ಯಸನಿಗಳು ದುಡಿಯುವ ಶಕ್ತಿ ಕಳೆದುಕೊಂಡು ಕೌಟುಂಬಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ನೆಮ್ಮದಿ ಹಾಳಾಗುತ್ತಿದ್ದು, ರಾಜ್ಯವನ್ನು ಮದ್ಯಮುಕ್ತವಾಗಿ ಮಾಡಲು ಮದ್ಯ ನಿಷೇಧ ಮಾಡಬೇಕೆಂದು ಹೇಳಲಾಗಿದೆ.
Laxmi News 24×7