Breaking News

ಅಂಬಾನಿ ಮನೆ ಬಳಿ ಮತ್ತೊಂದು ಕಾರನ್ನು ನೋಡಿದ ಪೊಲೀಸರು!

Spread the love

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಮನೆ ಹತ್ತಿರ ಸ್ಫೋಟಕ ತುಂಬಿದ ಕಾರು ಪತ್ತೆಯಾದ ಸ್ಥಳದಲ್ಲಿ ಮತ್ತೊಂದು ಕಾರನ್ನು ಪೊಲೀಸರು ನೋಡಿರುವುದಾಗಿ ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.

ಇದರ ವಿಚಾರಣೆ ನಡೆಯುತ್ತಿದ್ದು, ಇಲ್ಲಿಯವರೆಗೂ ಮುಂಬೈ ಅಪರಾಧ ವಿಭಾಗದ ಪೊಲೀಸರು 25 ಜನರ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅಂಬಾನಿ ಮನೆ ಬಳಿ ನಿಂತಿದ್ದ ಸ್ಪೋಟಕ ತುಂಬಿದ ಕಾರಿನಿಂದ ಇಳಿದ ಚಾಲಕ, ಇನ್ನೋವಾ ಕಾರಿನಲ್ಲಿ ತೆರಳುವುದು ಸಿಸಿಟಿವಿಯಲ್ಲಿ ಕಂಡುಬಂದಿದ್ದು, ಆ ಚಾಲಕನಿಗಾಗಿ ಪೊಲೀಸರ ತಂಡ ತೀವ್ರ ಪ್ರಯತ್ನ ನಡೆಸುತ್ತಿದೆ.

ಆ ಮಾರ್ಗದಲ್ಲಿನ ನೂರಾರು ಸಿಸಿಟಿವಿ ದೃಶ್ಯಾವಳಿಗಳನ್ನು ವಿಚಾರಣಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದರೆ, ಇಲ್ಲಿಯವರೆಗೂ ಯಾವುದೇ ಸಾಕ್ಷ್ಯಧಾರಗಳು ದೊರೆತಿಲ್ಲ, ಈವರೆಗಿನ ತನಿಖೆಯಲ್ಲಿ ಭಯೋತ್ಪಾದಕ ಚಟುವಟಿಕೆಯ ಅಂಶಗಳು ಕಂಡುಬಂದಿಲ್ಲ ಎಂದು ಅವರು ಹೇಳಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಅಂಬಾನಿ ಅವರ ಬಹು ಅಂತಸ್ತಿನ ಕಟ್ಟಡ ಅಂಟಿಲಾ ಬಳಿ 2.5 ಕೆಜಿ ಜಿಲಾಟಿನ್ ಕಡ್ಡಿಗಳನ್ನು ಹೊಂದಿದ್ದ ಸ್ಕಾರ್ಪಿಯಾ ಕಾರೊಂದು ಗುರುವಾರ ಸಂಜೆ ಪತ್ತೆಯಾಗಿತ್ತು. ಅದರೊಳಗೆ ಅಂಬಾರಿ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಹಾಕುವ ಪತ್ರಯೊಂದು ಕಂಡುಬಂದಿತ್ತು. ಆ ಸ್ಕಾರ್ಪಿಯೋ ಕಾರನ್ನು ಕಳೆದ ವಾರ ಮುಲುಂಡಾ ಪ್ರದೇಶದಿಂದ ಕಳವು ಮಾಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಇನ್ನೋವಾ ಕಾರಿನೊಂದಿಗೆ ಸ್ಕಾರ್ಪಿಯೋ ಕಾರು ಗುರುವಾರ ಬೆಳಗ್ಗೆ ಅಂಬಾನಿ ಮನೆ ಬಳಿಗೆ ತೆರಳಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ಸ್ಕಾರ್ಪಿಯೋದಿಂದ ಇಳಿದ ಚಾಲಕ ಮತ್ತೊಂದು ಕಾರಿನಲ್ಲಿ ತೆರಳಿದ್ದಾನೆ. ಮುಂಬೈಯಿಂದ ನಿರ್ಗಮಿಸುವ ಇನ್ನೋವಾ ಕಾರಿನ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಶಕ್ಕೆ ಪಡೆಯಲಾದ ಸ್ಕಾರ್ಪಿಯೋ ಕಾರನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ