ಮಹಾರಾಷ್ಟ್ರ: 5 ವರ್ಷ ಹಳೆಯ ಕೇಸ್ ಒಂದರಲ್ಲಿ ಹೃತಿಕ್ ರೋಷನ್ ಇಂದು ಮುಂಬೈ ಪೊಲೀಸ್ ಸ್ಟೇಷನ್ಗೆ ಬಂದು ಕ್ರೈಂ ಬ್ರಾಂಚ್ ಅಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಿದ್ಧಾರೆ. 2016ರಲ್ಲಿ ನಟ ಹೃತಿಕ್ ರೋಷನ್ ಮುಂಬೈ ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಿಸಿದ್ರು. 2013ರಿಂದ 2014ರವರೆಗೆ ನನ್ನ ಹೆಸರಲ್ಲಿ ನಕಲಿ ಇ-ಮೇಲ್ ಐಡಿ ರಚಿಸಿ, ಕಂಗನಾ ಜೊತೆ ಯಾರೋ ಮಾತನಾಡ್ತಿದ್ಧಾರೆ ಅಂತ ದೂರಿದ್ದರು. ಆದ್ರೆ ಕಂಗನಾ ಮಾತ್ರ ಹೃತಿಕ್ ನನ್ನ ಜೊತೆ ಪ್ರೀತಿಯ ನಾಟಕವಾಡಿ, ಮೋಸ ಮಾಡಿದ್ದಾರೆ ಅಂತ ಆರೋಪಿಸಿದ್ದರು.
ಇವರಿಬ್ಬರ ನಡುವಿನ ಆರೋಪ-ಪ್ರತ್ಯಾರೋಪಗಳ ಬಗ್ಗೆ ಆರಂಭದಲ್ಲಿ ಮುಂಬೈ ಪೊಲೀಸ್ನ ಸೈಬಲ್ ಸೆಲ್ ತನಿಖೆ ಆರಂಭಿಸಿತ್ತು. ನಂತರದಲ್ಲಿ 2020ರ ಡಿಸೆಂಬರ್ನಲ್ಲಿ ಕ್ರಿಮಿನಲ್ ಇಂಟೆಲಿಜೆನ್ಸ್ ಯುನಿಟ್ಗೆ ತನಿಖೆಯನ್ನು ವರ್ಗಾಯಿಸಲಾಗಿತ್ತು. ಇದೀಗ ಇದೇ ಪ್ರಕರಣದಲ್ಲಿ ಹೃತಿಕ್ ರೋಷನ್ ವಿಚಾರಣೆಗೆ ಸಮನ್ಸ್ ನೀಡಲಾಗಿತ್ತು. ಅದರಂತೆ ಹೃತಿಕ್ ವಿಚಾರಣೆಗೆ ಹಾಜರಾಗಿದ್ದಾರೆ.
 Laxmi News 24×7
Laxmi News 24×7
				 
		 
						
					 
						
					 
						
					