ಬೆಂಗಳೂರು: ಪವನ್ ಒಡೆಯರ್ ನಿರ್ದೇಶನ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಗೂಗ್ಲಿ ಸಿನಿಮಾ ತೆರೆಕಂಡ ನಿನ್ನೆಗೆ 7 ವರ್ಷವಾಗಿದೆ. ಈ ಸಮಯದಲ್ಲಿ ಚಿತ್ರತಂಡ ಸಿನಿಮಾದ ಯಶಸ್ಸನ್ನು ನೆನಪಿಸಿಕೊಂಡಿದೆ.
2013ರ ಜುಲೈ 19ರಂದು ಗೂಗ್ಲಿ ಸಿನಿಮಾ ತೆರೆಕಂಡಿತ್ತು. ಯಶ್ ನಾಯಕನಾಗಿ, ಕೃತಿ ಕರಬಂಧ ನಾಯಕಿಯಾಗಿ ಮಿಂಚಿದ್ದರು. ಲವ್, ಕಾಲೇಜ್ ಲೈಫ್, ಸಕ್ಸಸ್ ಹೀಗೆ ಎಲ್ಲ ಅಂಶಗಳನ್ನು ಒಳಗೊಂಡಿದ್ದ ಸಿನಿಮಾ ಅಂದು ಕಾಲೇಜು ಯುವಕ-ಯುವತಿಯರಿಗೆ ಬಹಳ ಇಷ್ಟ ಆಗಿತ್ತು. ಈ ಮೂರು ಕಥೆ ಹಂದರವನ್ನು ಇಟ್ಟುಕೊಂಡು ಸ್ಟೋರಿ ಹೇಳುವಲ್ಲಿ ನಿರ್ದೇಶಕ ಪವನ್ ಒಡೆಯರ್ ಗೆದ್ದು ಬೀಗಿದ್ದರು. ಈ ಸಿನಿಮಾ ಹಿಟ್ ಆಗಿ ಯಶ್ ಅವರಿಗೆ ಒಳ್ಳೆಯ ನೇಮ್ ತಂದುಕೊಟ್ಟಿತ್ತು. ಜೊತೆಗೆ ಗಲ್ಲಾ ಪೆಟ್ಟಿಗೆಯಲ್ಲೂ ಸದ್ದು ಮಾಡಿತ್ತು.
ಈಗ ಈ ಸಿನಿಮಾಗೆ 7 ವರ್ಷ ತುಂಬಿದ ನೆನಪಿನಲ್ಲಿ ಚಿತ್ರದ ನಾಯಕ ರಾಂಕಿಗ್ ಸ್ಟಾರ್ ಯಶ್ ಅವರು ಟ್ವೀಟ್ ಮಾಡಿದ್ದು, ಸಿನಿಮಾರಂಗಕ್ಕೆ ಬಂದು 12 ವರ್ಷ ತುಂಬಿದ ದಿನವನ್ನು ಸ್ಪೆಶಲ್ ಆಗಿ ಆಚರಣೆ ಮಾಡಿದ ಎಲ್ಲರಿಗೂ ಧನ್ಯವಾದ. ಇದರ ಜೊತೆಗೆ ಗೂಗ್ಲಿ ಸಿನಿಮಾ ತೆರೆಕಂಡು ಇಂದಿಗೆ 7 ವರ್ಷ ತುಂಬಿದೆ. ಹೀಗಾಗಿ ಗೂಗ್ಲಿ ಸಿನಿಮಾ ತಂಡಕ್ಕೆ ಧನ್ಯವಾದ. ಜಯಣ್ಣ ಫಿಲಮ್ಸ್, ಪವನ್ ಒಡೆಯರ್, ಕೃತಿ ಕರಬಂಧ ಸೇರಿದಂತೆ ಸಿನಿಮಾ ನಿರ್ಮಾಣದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.
ಯಶ್ ಅವರ ಟ್ವೀಟ್‍ಗೆ ರೀಟ್ವೀಟ್ ಮಾಡಿರುವ ಪವನ್ ಒಡೆಯರ್ ಅವರು ಧನ್ಯವಾದಗಳು, ಗೂಗ್ಲಿ ಎಂದರೆ ಇದು ಎಂದು ಹೇಳಿದ್ದರು. ಇದಕ್ಕೆ ಮತ್ತೆ ರೀಟ್ವೀಟ್ ಮಾಡಿರುವ ಯಶ್ ಅವರು, ನೀನು ಮತ್ತೊಮ್ಮೆ ಗೂಗ್ಲಿ ಎಂದರೆ. ಈಗ ಆದ್ರೂ ಬಗ್ಗೆ ಹೇಳುವ ಮೂಡ್ ಇಲ್ಲ. ನೆಕ್ಸ್ಟ್ ಟೈಮ್ ಸಿಕ್ಕಾಗ ಹೇಳುತ್ತೇನೆ ಎಂದು ಒಡೆಯರ್ ಅವರ ಕಾಲೆಳೆದಿದ್ದಾರೆ. ಈಗ ಹೇಳುವ ಮೂಡ್ ಇಲ್ಲ. ನೆಕ್ಸ್ಟ್ ಟೈಮ್ ಸಿಕ್ಕಾಗ ಹೇಳುತ್ತೇನೆ ಎನ್ನುವ ಡೈಲಾಗ್ ಗೂಗ್ಲಿ ಮೂವಿಯಲ್ಲಿದ್ದು, ಆ ಕಾಲಕ್ಕೆ ಬಹಳ ಜನಪ್ರಿಯವಾಗಿತ್ತು.
ತಾನೂ ಅಭಿನಯಿಸಿದ ಚಿತ್ರ ತೆರೆಕಂಡು ಏಳು ವರ್ಷವಾದ ಸಂಭ್ರಮದಲ್ಲಿ ಟ್ವೀಟ್ ಮಾಡಿರುವ ನಾಯಕ ನಟಿ ಕೃತಿ ಕರಬಂಧ, ಡಾಕ್ಟ್ರೇ ಎಂಬುದು ನನ್ನ ನೆಚ್ಚಿನ ನಿಕ್‍ನೇಮ್ ಆಗಿದೆ. ನನಗೆ ಈ ಮೂವಿ ಬಗ್ಗೆ ಹೆಮ್ಮೆ ಇದೆ. ಪವನ್ ಒಡೆಯರ್, ಜಯಣ್ಣ ಫಿಲಮ್ಸ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಧನ್ಯವಾದಗಳು ಮತ್ತು ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ರೀಟ್ವೀಟ್ ಮಾಡಿರುವ ಪವನ್ ನಿಮಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.