ಕಲಬುರಗಿ: ವಿಷ ಸೇವಿಸಿ ಖಾಸಗಿ ಶಾಲೆಯ ಮಾಲೀಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಕಲಬುರಗಿಯ ವಿವೇಕಾನಂದ್ ನಗರದ ನಿವಾಸಿ ಶಂಕರ್ ಬಿರಾದರ್(43) ಮೃತ ದುರ್ದೈವಿ. ಸೇಡಂ ತಾಲೂಕಿನಲ್ಲಿ ಖಾಸಗಿ ಶಾಲೆ ಹೊಂದಿರುವ ಶಂಕರ್ ಬಿರಾದರ್, ಡೆತ್ನೋಟ್ ಬರೆದಿಟ್ಟು ಮನೆಯಲ್ಲೇ ವಿಷ ಕುಡಿದು ಸತ್ತಿದ್ದಾರೆ.
ಸಾಲಭಾದೆ ಮತ್ತು ಸಾಲಗಾರರ ಕಿರುಳಕ್ಕೆ ಬೇಸತ್ತ ಶಂಕರ್ ಬಿರಾದಾರ್ ಸಾವಿನ ಮನೆಯ ಕದ ತಟ್ಟಿದ್ದಾರೆ. ಖಾಸಗಿ ಶಾಲೆ ನಡೆಸಲು ಸಾಲ ಮಾಡಿಕೊಂಡಿದ್ದರು. ಸಾಲ ಪಾವತಿಸಿಲ್ಲ ಎಂದು ಸಾಲಗಾರರು ಶಾಲಾ ಬಸ್ ಗಳನ್ನು ಸೀಜ್ ಮಾಡಿದ್ದರು. ಇದರಿಂದ ಮನನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರ್ ಬಿರಾದರ್ ಸಾವಿನ ಬಗ್ಗೆ ಗುರುವಾರ ಬೆಳಗ್ಗೆ ಮತ್ತೊಂದು ಖಾಸಗಿ ಶಾಲೆಯ ಮಾಲೀಕ ಬಸವರಾಜ್ ದಿಗ್ಗಾವಿ ಎಂಬುವವರು ಮಾಜಿ ಸಿಎಂ ಕುಮಾರಸ್ವಾಮಿ ಬಳಿ ಅಳಲು ತೋಡಿಕೊಂಡಿದ್ದಾರೆ.
Laxmi News 24×7