ಐಜ್ವಾಲ್, ಫೆ.19 (ಪಿಟಿಐ)- ಮಿಜೋರಾಂನ ಚಂಪಾಯ್ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಆಮೆಗಳು, ಸರೀಸೃಪಗಳು ಹಾಗೂ ವಿಲಕ್ಷಣ ರೀತಿಯ ಬೀಜಗಳನ್ನು ಅಸ್ಸಾಂ ರೈಫಲ್ಸ್ ವಶಪಡಿಸಿಕೊಂಡು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಕಸ್ಟಂಸ್ ಇಲಾಖೆ ಮತ್ತು ಅಸ್ಸಾಂ ರೈಫಲ್ಸ್ ಜಂಟಿ ಕಾರ್ಯಾಚರಣೆ ನಡೆಸಿ 20 ಚುಕ್ಕಿ ಆಮೆಗಳನ್ನು, 38 ಕೆಂಪು ಪಾದ ಆಮೆಗಳನ್ನು, 17 ಹಳದಿ, ಕಿತ್ತಳೆ, ಹಸಿರು ಇಗುವಾನಾ, ಮೂರು ಗಡ್ಡದ ಡ್ರಾಗನ್, 3 ಅಲ್ಬಿನೋ ಇಗುವಾನ, ವಿಲಕ್ಷಣ ಬೀಜಗಳು ಹಾಗೂ ಗೊಬ್ಬರವನ್ನು ಜಿಲ್ಲೆಯ ತ್ಯಾವೋ ನದಿಯ ಫ್ರೆಂಡ್ಶಿಪ್ ಬ್ರಿಡ್ಜ್ ಗುರುವಾರ ವಶಪಡಿಸಿಕೊಳ್ಳಲಾಗಿದೆ ಎಂದು ಅರೆಸೇನಾ ಪಡೆ ವಕ್ತಾರರು ತಿಳಿಸಿದ್ದಾರೆ.
