Breaking News

ನನಗೆ ನೋಟಿಸ್ ಬಂದಿದೆ.ಯಡಿಯೂರಪ್ಪನವರ ಕುಟುಂಬದಿಂದ ಸರ್ಕಾರಕ್ಕೆ ಹೇಗೆ ಕೆಟ್ಟ ಹೆಸರು ಬರುತ್ತಿದೆ ಎಂದು 11 ಪುಟಗಳ ಉತ್ತರ ಬರೆದಿದ್ದೇನೆ.

Spread the love

ಬೆಂಗಳೂರು: ನಾನು ಪಕ್ಷದ ವಿರುದ್ಧವಾಗಲಿ ಅಥವಾ ನಮ್ಮ ನಾಯಕರಾದ ನರೇಂದ್ರ ಮೋದಿ ವಿರುದ್ಧವಾಗಲಿ ಯಾವುದೇ ಹೇಳಿಕೆ ನೀಡಿಲ್ಲ. ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪನವರ ಕುಟುಂಬ ರಾಜಕಾರಣ ಹಾಗೂ ವಿಜಯೇಂದ್ರರ ವರ್ಗಾವಣೆ ದಂಧೆ ಬಗ್ಗೆ ಮಾತ್ರ ಆರೋಪಿಸಿದ್ದೇನೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೈಕಮಾಂಟ್​ನಿಂದ ನನಗೆ ನೋಟಿಸ್ ಬಂದಿದೆ. ನೋಟಿಸ್​ಗೆ 11 ಪುಟಗಳ ಉತ್ತರ ಬರೆದಿದ್ದೇನೆ. ಯಡಿಯೂರಪ್ಪನವರ ಕುಟುಂಬದಿಂದ ಸರ್ಕಾರಕ್ಕೆ ಹೇಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಸುದೀರ್ಘ ಉತ್ತರ ನೀಡಿದ್ದೇನೆ ಎಂದರು.

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಕೆಲಸ ಮಾಡಿದ ಕಾರ್ಯಕರ್ತ ನಾನು. ಭ್ರಷ್ಟಾಚಾರ ರಹಿತ ಹಾಗೂ ಕುಟುಂಬ ರಾಜಕಾರಣ ರಹಿತ ಆಡಳಿತ ನಡೆಯಬೇಕೆಂಬ ನರೇಂದ್ರ ಮೋದಿ ಅವರ ಕಲ್ಪನೆ ರೀತಿಯಲ್ಲಿ ಆಡಳಿತ ನಡೆಯುತ್ತಿಲ್ಲ ಎಂದು ಟೀಕಿಸಿದರು.

ವಿಜಯೇಂದ್ರ ಬಗ್ಗೆ ವರಿಷ್ಠ ಮಂಡಳಿಯಿಂದ ತನಿಖೆ ನಡೆಯಬೇಕೆಂದು ಮನವಿ ಮಾಡಿದ್ದೇನೆ. ಮಾರಿಷಸ್ ಪ್ರವಾಸದ ಬಗ್ಗೆ ಉತ್ತರ ನೀಡದೆ, ಡಿವಿ ಗುಂಡಪ್ಪ, ಶಿವರಾಮ ಕಾರಂತರ ಮಾತನ್ನು ಹೇಳಿ ತಪ್ಪಿಸಿಕೊಳ್ಳಲು ಆಗಲ್ಲ. ಕೊಟ್ಯಂತರ ಕಾರ್ಯಕರ್ತರ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಯಡಿಯೂರಪ್ಪನವರ ಭ್ರಷ್ಟಾಚಾರ ಆಡಳಿತ, ವಿಜಯೇಂದ್ರರ ಹಸ್ತಕ್ಷೇಪದ ಬಗ್ಗೆ ಸವಿವರವಾಗಿ ಪತ್ರದಲ್ಲಿ ಬರೆದಿದ್ದೇನೆಂದರು.

ನಾನು ಎಲ್ಲೂ ವಿಷಾದ ವ್ಯಕ್ತಪಡಿಸಿಲ್ಲ ಮತ್ತು ಕ್ಷಮೆಯನ್ನೂ ಕೇಳಿಲ್ಲ. ಸಾಕಷ್ಟು ವಿಚಾರ ನಾನು ಪ್ರಸ್ತಾಪ ಮಾಡಿದ್ದೇನೆ. ಹಂತ ಹಂತವಾಗಿ ಎಲ್ಲಾ ವಿಚಾರಗಳನ್ನು ಮುಂದೆ ನಿಮಗೆ ತಿಳಿಸುತ್ತೇನೆ. ಮಾರಿಷಸ್ ಬಗ್ಗೆ, ಯಾವ ವಿಮಾನ ಎಂಬುದರ ಕುರಿತು ಮತ್ತು ಹಣ ನೀಡಲು ಹಿಂದಿನ ಗೃಹ ಸಚಿವರ ಪಿಎ ಹೋಗಿರುವ ಬಗ್ಗೆ ಪತ್ರದಲ್ಲಿ ತಿಳಿಸಿದ್ದೇನೆ. ಸಿಡಿ ಮತ್ತು ಇಡಿ ವಿಚಾರವನ್ನು ಪ್ರಸ್ತಾಪ ಮಾಡಿದ್ದೇನೆಂದರು.

ನನಗೆ ಪಕ್ಷ ದ್ರೋಹಿ ಎಂದು ನನಗೆ ಕಳಂಕ ತರಲು ಹೊರಟಿದ್ದಾರೆ. ನಾನು ಪಕ್ಷದ ವಿರುದ್ಧ ಎಂದು ಮಾತನಾಡಿಲ್ಲ. ಭ್ರಷ್ಟಾಚಾರ, ಕುಟುಂಬ ಶಾಹಿ ವಿರುಧ್ಧ ನನ್ನ ಹೋರಾಟ. ವಿಜಯೇಂದ್ರ ವಿರುಧ್ಧ 45 ಪುಟಗಳ ಸುದೀರ್ಘ ಪತ್ರ ಬರೆದಿದ್ದೇನೆ. ಭ್ರಷ್ಟಾಚಾರ, ವರ್ಗಾವಣೆ ದಂಧೆ, ನಿಗಮ ಮಂಡಳಿಯ ನೇಮಕಾತಿ ಎಲ್ಲದರ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಿದ್ದೇನೆ ಎಂದ ಯತ್ನಾಳ್


Spread the love

About Laxminews 24x7

Check Also

ಕಲಾ ಪ್ರತಿಭೋತ್ಸವಕ್ಕೆ ಚಾಲನೆ

Spread the love ಕಲಾ ಪ್ರತಿಭೋತ್ಸವಕ್ಕೆ ಚಾಲನೆ ಬೆಳಗಾವಿ. ಜಿಲ್ಲೆಯ ಬಾಲ ಪ್ರತಿಭೆ ಹಾಗೂ ಯುವ ಪ್ರತಿಭೆಗಳಿಗೆ ಜಾನಪದ ಗೀತೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ