Breaking News

ನಮ್ಮ ಭರವಸೆಗಳು ಸುಳ್ಳಾಗಿವೆ, ನೀವೂ ವಿಫಲರಾಗಿದ್ದೀರಿ: ಪ್ರಧಾನಿ ಮೋದಿ ಬಗ್ಗೆ ಶಂಕರ್ ಬಿದರಿ

Spread the love

ಬೆಂಗಳೂರು, ಫೆ,18: ಮೋದಿಯವರು 2014ರಲ್ಲಿ ಅಧಿಕಾರಕ್ಕೆ ಬಂದಾಗ ನಾನು ಉತ್ಸಾಹದಲ್ಲಿದ್ದೆ. ಮೋದಿ ಜನರನ್ನು ತನ್ನೊಂದಿಗೆ ಕೊಂಡೊಯ್ದು ದೇಶದ ಹಣೆಬರಹವನ್ನು ಬದಲಾಯಿಸುತ್ತಾರೆ ಎಂದು ನಂಬಿಕೊಂಡಿದ್ದೆ. ಈ ಕಾರಣಕ್ಕೇ ನಾನು ಅವರಿಗೆ ನೋಟ್ ಬ್ಯಾನ್ ಹಾಗೂ 370ರ ವಿಧಿ ಸಂಬಂಧ ಬೆಂಬಲ ವ್ಯಕ್ತಪಡಿಸಿದ್ದೆ. ಆದರೆ ಇಂದು ನನಗೆ ತುಂಬಾ ಬೇಸರವಾಗುತ್ತಿದೆ. ಮೋದಿ ಕೂಡ ಸೋತಿದ್ದಾರೆ” ಎಂದು ರಾಜ್ಯ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಫೇಸ್‌ಬುಕ್‌ನಲ್ಲಿ ಹಲವು ಪೋಸ್ಟ್‌ಗಳನ್ನು ಮಾಡಿರುವ ಶಂಕರ್ ಬಿದರಿ ಅವರು, ನೆಹರೂ, ಶಾಸ್ತ್ರಿ, ಇಂದಿರಾ, ಮೊರಾರ್ಜಿಯವರು ಮೂರ್ಖರೇ? ದೇಶ ಬಡತನದಲ್ಲಿದ್ದಾಗ ವಿದೇಶಿ ತೈಲ, ವಿಮಾ ಕಂಪನಿಗಳು, ಪಿಎಸ್‌ಯುಗಳಂತಹ ರಾಷ್ಟ್ರೀಯ ಸೊತ್ತುಗಳನ್ನು ಅವರು ನಿರ್ಮಿಸಿದ್ದರು. ಆದರೆ ಅವರು ಮಾಡಿದ ಈ ರಾಷ್ಟ್ರೀಯ ಸೊತ್ತುಗಳು ಇಷ್ಟು ಬೇಗ ವಿದೇಶಿ ಕಂಪನಿಗಳಿಗೆ ಮಾರಾಟಕ್ಕೆ ಬರಲಿವೆ ಎಂದು ಊಹಿಸಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ನೋಟ್ ಬ್ಯಾನ್ ನಂತರ ಕೋಟಿಗಟ್ಟಲೆ ಹಣ ಕರ್ನಾಟಕದ ಕೋ ಆಪರೇಟಿವ್ ಬ್ಯಾಂಕ್‌ಗಳಲ್ಲಿ ಹಾಗೂ ಇನ್ನಿತರ ರಾಜ್ಯಗಳಲ್ಲಿ ಕಾನೂನು ಬಾಹಿರವಾಗಿ ವಿನಿಯಮವಾಗಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಆರ್ಬಿಐ ತೆಗೆದುಕೊಂಡ ಕ್ರಮವಾದರೂ ಏನು ಎಂದು ಪ್ರಶ್ನಿಸಿರುವ ಅವರು, 1999ರಿಂದಲೂ ಕೃಷ್ಣಾ ನದಿ ಕಣಿವೆ ಬಿಜೆಪಿಗೆ ನಿರಂತರವಾಗಿ ಬೆಂಬಲ ನೀಡಿದೆ. ಆ ಸಂದರ್ಭ ಮೋದಿಯವರು ಒಂದು ಹನಿ ನೀರನ್ನೂ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿದ್ದರು. ನಾವು ಅವರನ್ನು ನಂಬಿದ್ದೆವು. ಆದರೆ ಏಳು ವರ್ಷಗಳು ಕಳೆದವು. ಇಂದಿಗೂ ಕರ್ನಾಟಕಕ್ಕೆ ಮೀಸಲಾದ 300 ಟಿಎಂಸಿ ನೀರು ವ್ಯರ್ಥವಾಗಿ ಹೋಗುತ್ತಿದೆ ಎಂದು ಬಿದರಿ ಬೇಸರ ವ್ಯಕ್ತಪಡಿಸಿದ್ದಾರೆ.

ನೀವೂ ವಿಫಲರಾದಿರಿ ಮೋದಿ: ಭ್ರಷ್ಟಾಚಾರ ಹಾಗೂ ಗಂಭೀರ ಅಪರಾಧಗಳ ಆರೋಪ ಎದುರಿಸುತ್ತಿರುವ ರಾಜಕೀಯ ವ್ಯಕ್ತಿಗಳನ್ನು ಈ ವ್ಯವಸ್ಥೆಯಿಂದ ಮೋದಿಯವರು ತೆಗೆದು ಹಾಕುತ್ತಾರೆ ಎಂದು ನಿರೀಕ್ಷಿಸಿದ್ದೆ. ಆದರೆ ಏಳು ವರ್ಷಗಳು ಕಳೆದು ಹೋದವು. ನಮ್ಮ ಭರವಸೆಗಳು ಸುಳ್ಳಾಗಿವೆ. ನೀವೂ ವಿಫಲರಾಗಿದ್ದೀರಿ ಎಂದು ಅವರು ಪೋಸ್ಟ್‌ ಮಾಡಿದ್ದಾರೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ