Breaking News

ಜೀವನಪೂರ್ತಿ ಜತೆಯಿರುವ ಕನಸು ಕಂಡವರು ಒಟ್ಟಿಗೇ ಜಲಸಮಾಧಿಯಾದರು.! ಕಣ್ಣೀರು ತರಿಸುವ ಕಥೆಯಿದು

Spread the love

ಭೋಪಾಲ್​: ಇತ್ತೀಚೆಗೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬಸ್​ ಒಂದು ಕಾಲುವೆಗೆ ಬಿದ್ದು 51 ಜನರು ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ. ಈ ಅಪಘಾತದಲ್ಲಿ ಮೃತರಾದವರ ಜತೆ ಅದೆಷ್ಟೋ ಕನಸುಗಳು, ಅದೆಷ್ಟೋ ಕುಟುಂಬಗಳ ಸಂತಸವೂ ನೀರಿನ ಪಾಲಾಗಿ ಹೋಗಿದೆ. ಅದೇ ಅಪಘಾತದಲ್ಲಿ ಜಲ ಸಮಾಧಿಯಾದ ದಂಪತಿಯ ಕಥೆ ಇದು..

ಸಿಧಿ ಜಿಲ್ಲೆಯ ನಿವಾಸಿ ಅಜಯ್​ಗೆ ಇನ್ನೂ 25 ವರ್ಷ. ಕಳೆದ ವರ್ಷ ಜೂನ್ ​8ರಂದು ಆತ ತಪಸ್ಯಾ (23) ಹೆಸರಿನ ಯುವತಿಯನ್ನು ಮದುವೆಯಾಗಿದ್ದು. ಇಬ್ಬರೂ ಸೇರಿ ಅದೆಷ್ಟೋ ಕನಸುಗಳನ್ನು ಕಟ್ಟಿದ್ದರು. ನರ್ಸ್​ ಆಗಿ ಜವಾಬ್ದಾರಿಯುತ ಹೆಣ್ಣಾಗುವ ಆಸೆಯನ್ನು ತಪಸ್ಯಾ ಕಂಡಿದ್ದಳು. ಅದರ ಪರೀಕ್ಷೆಗೆ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಳು. ಹೆಂಡತಿಯ ಪರೀಕ್ಷೆಯ ಎಎನ್​ಎಮ್​ ಪೇಪರ್​ ತರಲೆಂದು ಆ ದಿನ ಹೊರಟಿದ್ದ. ಗಂಡನ ಜತೆ ತಾನೂ ಹೋಗುವ ನಿರ್ಧಾರ ಮಾಡಿದ ತಪಸ್ಯಾ ಆತನೊಂದಿಗೆ ಬಸ್ಸು ಹತ್ತಿದ್ದಳು.

ಬಸ್ಸು ಹೋಗಬೇಕಿದ್ದ ಸ್ಥಳ ಬಿಟ್ಟು ಕಾಲುವಗೆ ಹೋಗಿ ಬಿದ್ದಿದೆ. ಕನಸ ಹೊತ್ತು ಹೊರಟಿದ್ದ ಗಂಡ ಹೆಂಡತಿ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ತಪಸ್ಯಾ ದೇಹ ಮಧ್ಯಾಹ್ನ 3 ಗಂಟೆಗೆ ಸಿಕ್ಕಿದ್ದರೆ ವಿಜಯ್​ ದೇಹ ಸಂಜೆ 5 ಗಂಟೆಗೆ ಸಿಕ್ಕಿದೆ. ನವ ದಂಪತಿ ಮೃತ ದೇಹದ ಮರಣೋತ್ತರ ಪರೀಕ್ಷೆಯ ನಂತರ ಇಬ್ಬರನ್ನೂ ಒಟ್ಟಿಗೆ ಅಂತ್ಯಸಂಸ್ಕಾರ ಮಾಡಿದ್ದಾರೆ ಅವರ ಕುಟುಂಬಸ್ಥರು


Spread the love

About Laxminews 24x7

Check Also

ಬೆಂಗಳೂರಲ್ಲಿ ಮುಂಬೈ ಮಾದರಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಿ: ಡಿಸಿಎಂ ಸೂಚನೆ

Spread the love ಬೆಂಗಳೂರು: ಮುಂಬೈ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಬಿಎ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ