ಅಹ್ಮದ್ನಗರ (ಮಹಾರಾಷ್ಟ್ರ): ಚುನಾವಣೆಗು ಮುನ್ನ ಮತದಾರರನ್ನು ಸೆಳೆಯಲು ಜನಪ್ರತಿನಿಧಿಗಳು ನಾನಾ ಪ್ರಯತ್ನ ಮಾಡುತ್ತಾರೆ. ಗೆಲುವು ಸಾಧಿಸಿದ ಬಳಿಕವು ಡಿಜೆ ಸೌಂಡ್, ಮೆರವಣಿಗೆಯಂತಹ ಸಂಭ್ರಮಾಚರಣೆ ಮಾಡುತ್ತಾರೆ. ಈ ರೀತಿ ಶಾಸಕ ಅಥವಾ ಸಂಸದರ ಚುನಾವಣೆಯಲ್ಲಿ ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ, ಇಲ್ಲೊಬ್ಬ ಗ್ರಾಮ ಪಂಚಾಯಿತಿ ಸದಸ್ಯ ಪ್ರಮಾಣ ವಚನ ಸ್ವೀಕರಿಸಲು ಹೆಲಿಕಾಪ್ಟರ್ನಲ್ಲಿ ಬರುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ಅಂಬಿ-ದುಮಾಲಾ ಗ್ರಾಮದಲ್ಲಿ ಹೊಸದಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಅಧ್ಯಕ್ಷ, ಪ್ರಮಾಣ ವಚನ ಸ್ವೀಕರಿಸಲು ಫೆ. 12ರಂದು ಹೆಲಿಕಾಪ್ಟರ್ನಲ್ಲಿ ಆಗಮಿಸಿದರು. ಉದ್ಯಮಿ ಆಗಿರುವ ಜಲಿಂದರ್ ಗಾಗರೆ (50) ಪುಣೆಯಲ್ಲಿ ಕಂಪನಿಯನ್ನು ಹೊಂದಿದ್ದಾರೆ.
ಹೆಲಿಕಾಪ್ಟರ್ ಅನ್ನು ಬುಕ್ ಮಾಡಿದ ಜಲಿಂದರ್, ಪುಣೆಯಿಂದ ಹಳ್ಳಿಗೆ ತೆರಳಿದ್ದಾರೆ. ಬಳಿಕ 12 ಎತ್ತಿನ ಗಾಡಿಗಳಿಂದ ಗ್ರಾಮ ಪಂಚಾಯಿತಿಗೆ ಮೆರವಣಿಗೆ ಹೋಗಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು ಗ್ರಾಮದ ಅಬಿವೃದ್ಧಿಗಾಗಿ ಚುನಾವಣೆಗೆ ಸ್ಪರ್ಧಿಸಿದ್ದಾಗಿ ತಿಳಿಸಿದರು.
Laxmi News 24×7