Breaking News

ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಲೀಟರ್ ಪೆಟ್ರೋಲ್ ದರ 95.21 ರೂ

Spread the love

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗುತ್ತಿದ್ದು, ಇಂದು ಲೀಟರ್ ಪೆಟ್ರೋಲ್ ಬೆಲೆ 29 ಪೈಸೆ ಏರಿಕೆಯಾಗಿದ್ದರೆ ಡೀಸೆಲ್ ದರ 32 ಪೈಸೆ ಹೆಚ್ಚಳವಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳವಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಯಾಗುವುದು ಸಾಮಾನ್ಯ. ಆದರೆ ಅಂತಾರಾಷ್ತ್ರ‍ಿಯ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಳವಾಗದಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ತೈಲ ದರ ಏರುತ್ತಲೇ ಇದೆ ಎನ್ನಲಾಗಿದೆ.

ವಿವಿಧ ನಗರಗಳಲ್ಲಿ ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಬಗ್ಗೆ ಮಾಹಿತಿ ಇಲ್ಲಿದೆ:

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 91.40 ರೂ ಆಗಿದ್ದರೆ ಡೀಸೆಲ್ ದರ 83.47 ರೂ. ಆಗಿದೆ.
ದೆಹಲಿ: ಲೀಟರ್ ಪೆಟ್ರೋಲ್ ದರ 88.73ರೂ ಹಾಗೂ ಡೀಸೆಲ್ ದರ 79.06 ರೂ ಆಗಿದೆ.
ಚೆನ್ನೈ: ಲೀಟರ್ ಪೆಟ್ರೋಲ್ ದರ 88.73 ರೂ ಹಾಗೂ ಡೀಸೆಲ್ ದರ 79.06ರೂ ಆಗಿದೆ.
ಕೋಲ್ಕತ್ತಾ: ಲೀಟರ್ ಪೆಟ್ರೋಲ್ ದರ 90.01 ರೂ ಹಾಗೂ ಡೀಸೆಲ್ ದರ 82.65 ರೂ ಆಗಿದೆ
ಮುಂಬೈ: ಲೀಟರ್ ಪೆಟ್ರೋಲ್ ದರ 95.21 ರೂ ಹಾಗೂ ಡೀಸೆಲ್ ದರ 86.04 ರೂ ಆಗಿದೆ


Spread the love

About Laxminews 24x7

Check Also

25 ಸಾವಿರ ಲಂಚ ಪಡೆದು ರೆಡ್ ಹ್ಯಾಂಡಾಗಿ ಲೋಕಾ ಬಲೆಗೆ  ಸಿಕ್ಕಿಬಿದ್ದ ಪಿಡಿಓ

Spread the loveಬಾಕಿ ಸಂಬಳ ನೀಡಲು ಲಂಚ ಪಡೆದ ಪಿಡಿಓ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಹುಣಸೂರು ತಾಲೂಕು ಮುಳ್ಳೂರು ಗ್ರಾಮ ಪಂಚಾಯ್ತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ