Breaking News

ರೀಗಂಧ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಶಿರಸಿಯ ಹುಲೇಕಲ್ ವಲಯದ ಅರಣ್ಯ ಅಧಿಕಾರಿಗಳು ಮಾಲು ಸಮೇತವಾಗಿ ಬಂಧಿಸಿದ್ದಾರೆ.

Spread the love

ಶಿರಸಿ: ಶ್ರೀಗಂಧ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಶಿರಸಿಯ ಹುಲೇಕಲ್ ವಲಯದ ಅರಣ್ಯ ಅಧಿಕಾರಿಗಳು ಮಾಲು ಸಮೇತವಾಗಿ ಬಂಧಿಸಿದ್ದಾರೆ.

ಮನಜವಳ್ಳಿಯ ಕೃಷ್ಣ ಗೌಡ ಬಂಧಿತ ಆರೊಪಿ. ಬಂಧಿತನಿಂದ 12. ಕೆ.ಜಿ. ತೂಕದ ಶ್ರೀಗಂಧ ಹಾಗೂ ಕೃತ್ಯಕ್ಕೆ ಬಳಸಲಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಶಿರಸಿ ತಾಲೂಕಿನ ಹುಲೆಕಲ್ ವಲಯದ ಶೀಗೆಹಳ್ಳಿ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಈತ ಶ್ರೀಗಂಧವನ್ನು ಕಳ್ಳತನ ಮಾಡುತ್ತಿದ್ದ. ಗ್ರಾಮಸ್ಥರು ಹಾಗೂ ಗ್ರಾಮ ಅರಣ್ಯ ಸಮೀತಿಯ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಿಬ್ಬಂದಿಗಳು ಆತನನ್ನು ಬಂಧಿಸಿದ್ದಾರೆ. ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಎಸ್.ಜಿ.ಹೆಗಡೆ ಹಾಗೂ ಜಾನ್ಮನೆ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ರಘು .ಡಿ. ಇವರ ಮಾರ್ಗದರ್ಶನದಂತೆ, ಹುಲೆಕಲ್ ವಲಯ ಅರಣ್ಯ ಅಧಿಕಾರಿ ಮಂಜುನಾಥ ಹೆಬ್ಬಾರ್,ಉಪ ವಲಯ ಅರಣ್ಯ ಅಧಿಕಾರಿ ರವಿ.ಎಸ್,ವಿ.ಟಿ.ನಾಯ್ಕ, ಅರಣ್ಯ ರಕ್ಷಕರಾದ ವೀರಣ್ಣ ಯಲಿಗಾರ್,ಸಂತೋಷ ಕುಮಾರ್,ಪ್ರಮೊದ ನಾಯ್ಕ, ಹಾಗೂ ಶಿಗೆಹಳ್ಳಿ ಗ್ರಾಮ ಅರಣ್ಯ ಸಮಿತಿಯ ಸದಸ್ಯರು ಈ ಒಂದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.


Spread the love

About Laxminews 24x7

Check Also

ದೇವಾಲಯದ ಸುತ್ತ ಮಾಂಸಾಹಾರ ನಿಷೇಧ ನೋಟಿಸ್‌ ವಾಪಸ್​: ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಮಾಹಿತಿ

Spread the loveಬೆಂಗಳೂರು: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಶಿವನಗೆರೆ ಗ್ರಾಮದಲ್ಲಿನ ಹೊನ್ನೇಶ್ವರ ದೇವಾಲಯದ ಸುತ್ತಲು ಪ್ರಾಣಿಗಳ ವಧೆ ಮತ್ತು ಮಾಂಸಾಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ