Breaking News

ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ರ ಮನಗೆದ್ದ ಕಬ್ಬಿನ ಗದ್ದೆ ಡ್ಯಾನ್ಸ್‌

Spread the love

ಹಳೇ ಹಾಡುಗಳ ಮರುಸೃಷ್ಟಿ ಸಿನೆಮಾದಲ್ಲಿ ಹೊಸತಲ್ಲ. ಆದರೆ, ಹಳೇ ಸಿನೆಮಾದ ಜನಪ್ರಿಯ ಹಾಡನ್ನು ಇಲ್ಲೊಬ್ಬಳು ಹುಡುಗಿ ಕಬ್ಬಿನ ಗದ್ದೆ ನಡುವೆ ಅಭಿನಯಿಸಿ, ತೋರಿಸಿ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ರ ಮನಸ್ಸು ಗೆದ್ದಿದ್ದಾಳೆ.

1957ರ ‘ಮದರ್‌ ಇಂಡಿಯಾ’ ಚಿತ್ರದಲ್ಲಿ ನಟಿ ನರ್ಗೀಸ್‌ ಗದ್ದೆಗಳ ಮಧ್ಯದಲ್ಲಿ ‘ಘೂಂಘಾಟ್‌ ನಹೀಂ ಖೂಲೂನ್‌ ಸೈಯಾ ಟೊರೆ ಆಗೆ…’ ಎಂಬ ಹಾಡಿಗೆ ನರ್ತಿಸಿದ್ದರು. ಲತಾ ಮಂಗೇಶ್ಕರ್‌ ಕಂಠದಿಂದ ಹೊಮ್ಮಿದ್ದ ಈ ಹಾಡಿನ ಜನಪ್ರಿಯತೆ ಮನಗಂಡ ಉತ್ತರಪ್ರದೇಶದ ಅಮೊಹಾ ಹಳ್ಳಿಯ ಹುಡುಗಿ, ನರ್ಗೀಸ್‌ ರೀತಿಯ ಉಡುಪು ತೊಟ್ಟು, ಕಬ್ಬಿನ ಗದ್ದೆಯಲ್ಲಿ ಅದೇ ರೀತಿ ಡ್ಯಾನ್ಸ್‌ ಮಾಡಿದ್ದಾಳೆ. ಅಕ್ಕಪಕ್ಕದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾದ ಮಹಿಳೆಯರ ನಡುವೆ ಹುಡುಗಿ ಮಾಡಿರುವ ಮೋಹಕ ಡ್ಯಾನ್ಸ್‌ ಭಾರೀ ವೈರಲ್‌ ಆಗಿದ್ದು, ಸ್ವತಃ ಮಾಧುರಿ ಇದನ್ನು ಶೇರ್‌ ಮಾಡಿ, ಶಹಬ್ಟಾಶ್‌ ಹೇಳಿದ್ದಾರೆ.


Spread the love

About Laxminews 24x7

Check Also

ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾದ ಮೆಲೋಡಿ ಹಾಡು ರಿಲೀಸ್..

Spread the love ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾದ ಮೆಲೋಡಿ ಹಾಡು ರಿಲೀಸ್.. ರಾಣಾ-ಪ್ರಿಯಾಂಕಾ ಜೋಡಿಯ ಏಳುಮಲೆ ಸಿನಿಮಾದ‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ