ಶಿವಮೊಗ್ಗ. ಫೆ.10: ಕಳೆದ ವರ್ಷವಷ್ಟೇ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಯುವ ಜೋಡಿಗಳ ಮಧ್ಯೆ ವೈಮನಸ್ಯ ತಲೆದೋರಿ ಯುವತಿಯ ಸಂಶಯಾಸ್ಪದ ಸಾವಿನೊಂದಿಗೆ ಪರ್ಯಾವಸಾನಗೊಂಡಿದೆ. ಆಯನೂರು ನಿವಾಸಿ ಶಂಕರ್ ನಾಯ್ಕ್ ಮಗಳಾದ ಮೋನಿಕಾ 16 ತಿಂಗಳ ಹಿಂದೆ ಕೊನಗವಳ್ಳಿ ಗೋಪಾಲನಾಯ್ಕ್ ಪುತ್ರ ಚಂದನ್ ನನ್ನು ಪ್ರೀತಿಸಿ ಮದುವೆಯಾಗಿದ್ದಳು.
ಇವರಿಬ್ಬರೂ ಗಾಡಿಕೊಪ್ಪದಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದು, ಕಳೆದ ಮೂರ್ನಾಲ್ಕು ತಿಂಗಳಿಂದ ಇವರ ದಾಂಪತ್ಯ ಜೀವನ ಸರಿ ಇರಲಿಲ್ಲ.ಮೋನಿಕಾ ತನ್ನ ಅಂತಸ್ಥಿಗೆ ತಕ್ಕಂತೆ ಇಲ್ಲ ಹಾಗೂ ತವರಿನಿಂದ ವರದಕ್ಷಿಣೆ ತಂದಿಲ್ಲ ಎಂದು ಚಂದನ್ ಆಗಾಗ್ಗೆ ಜಗಳ ಮಾಡುತ್ತಿದ್ದ ಎಂದು ದೂರಲಾಗಿದೆ.ನ್ನೆ ಮಧ್ಯಾಹ್ನ ಮೋನಿಕಾ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಮೆಗ್ಗಾನ್ ಆಸ್ಪತ್ರೆಗೆ ಕರತರಲಾಗಿತ್ತು. ಆದರೆ ಸಾವನ್ನಪ್ಪಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದರು. ಮೋನಿಕಾ ಫ್ಯಾನಿಗೆ ನೇಣು ಬಿಗಿದುಕೊಂಡ ಸೀರೆಯನ್ನು ಪತಿ ಚಂದನ್ ಪಶುವೈದ್ಯ ಕಾಲೇಜಿನ ಬಳಿ ಎಸೆದು ಬಂದಿರುವುದು ಸಂಶಯಕ್ಕೆಡೆ ಮಾಡಿಕೊಟ್ಟಿದೆ.
Laxmi News 24×7