Breaking News

ವಿಷಯದ ಕಲಿಯಲ್ಲಿ ವಿದ್ಯಾರ್ಥಿಗಳ ದೌರ್ಬಲ್ಯವನ್ನು ಗಮನಿಸಿ ಉತ್ತಮ ರೀತಿಯ ಶಿಕ್ಷಣ ನೀಡಬೇಕು.: ಸುರೇಶ್ ಕುಮಾರ್

Spread the love

ಖಾನಾಪುರ -: ವಿಷಯದ ಕಲಿಯಲ್ಲಿ ವಿದ್ಯಾರ್ಥಿಗಳ ದೌರ್ಬಲ್ಯವನ್ನು ಗಮನಿಸಿ ಉತ್ತಮ ರೀತಿಯ ಶಿಕ್ಷಣ ನೀಡಬೇಕು. ಯಾವುದೇ ವಿಷಯದಲ್ಲಿ ಅವರ ಜ್ಞಾನ ಕುಂಠಿತವಾಗಬಾರದು. ಹಾಗಾಗಿ ಶಿಕ್ಷಕರು ಪೂರ್ವ ತಯಾರಿ ಮಾಡಿಕೊಂಡು ಸಮಪರ್ಕವಾಗಿ ಬೋಧನಾ ವಿಧಾನ ಅಳವಡಿಸಿಕೊಳ್ಳಬೇಕು ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ತಿಳಿಸಿದರು.
ಖಾನಾಪುರ ತಾಲ್ಲೂಕಿನ ವಿವಿಧ ಶಾಲೆಗಳಿಗೆ ಸೋಮವಾರ (ಫೆ.೮) ಭೇಟಿ ನೀಡಿದ ಬಳಿಕ ಖಾನಾಪುರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈ ವರ್ಷ ಹಲವು ಹೊಸ ಯೋಜನೆಗಳ ಜಾರಿಯ ಯೋಚನೆ ಇತ್ತು. ಆದರೆ ಕೋವಿಡ್ -19 ಅದನ್ನೆಲ್ಲ ಕಸಿದುಕೊಂಡಿತು. ಮುಂದಿನ ವರ್ಷ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯ ಸಹಾಯದಿಂದ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭ ಮಾಡಲಾಗುವುದು. ಕಳೆದ ವರ್ಷ ಕೋವಿಡ್ ನಿಂದಾಗಿ ಶಾಲಾ ವಾರ್ಷಿಕ ಅವಧಿಯಲ್ಲಿ ಕಡಿತವಾಗಿದ್ದು, ಮುಂಬರುವ ಬೇಸಿಗೆ ರಜೆ ದಿನಗಳನ್ನು ಕಡಿತ ಮಾಡಲಾಗುವುದು ಎಂದು ತಿಳಿಸಿದರು.
ಸೌಲಭ್ಯಗಳು ಇಲ್ಲದೆಯೂ ಹಲವು ವಿದ್ಯಾರ್ಥಿಗಳು ತರಗತಿಯಲ್ಲಿ ಉತ್ತಮ ಪಲಿತಾಂಶ ನೀಡುತ್ತಿದ್ದಾರೆ. ಅವರ ಸಾಧನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ತರಗತಿಯಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.
ಪ್ರತಿ ಶಿಕ್ಷಕರು ತರಗತಿಗೆ ಹೋಗುವ ಪೂರ್ವದಲ್ಲಿ ತಯಾರಿ ಮಾಡಿಕೊಂಡು ಹೋಗಬೇಕು. ಯಾವ ವಿಷಯದಲ್ಲಿ ವಿದ್ಯಾರ್ಥಿಗಳು ದುರ್ಬಲರಾಗಿರುತ್ತಾರೆ ಅದರತ್ತ ಹೆಚ್ಚು ಗಮನ ಹರಿಸಬೇಕು ಮತ್ತು ಉತ್ತಮ ರೀತಿಯ ಶಿಕ್ಷಣ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣದ ಮಾಸ್ಟರ್​​ ಮೈಂಡ್ ದಕ್ಷಿಣಕನ್ನಡ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ

Spread the love ಬೆಂಗಳೂರು/ದಕ್ಷಿಣ ಕನ್ನಡ: “ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದಿನ ಮಾಸ್ಟರ್​ ಮೈಂಡ್​​ ತಮಿಳುನಾಡಿನ ತಿರುವಲ್ಲೂರಿನ ಕಾಂಗ್ರೆಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ