Breaking News

ಡಿಕೆ ಶಿವಕುಮಾರ್ ಪುತ್ರಿ ವಿವಾಹ: ದೆಹಲಿಯಿಂದ ಹಲವು ಗಣ್ಯರ ಆಗಮನ ಸಾಧ್ಯತೆ

Spread the love

ಬೆಂಗಳೂರು,ಫೆಬ್ರವರಿ 08:ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ವಿವಾಹ ಫೆಬ್ರವರಿ 14 ರಂದು ನಡೆಯಲಿದ್ದು, ದೆಹಲಿಯಿಂದ ಹಲವು ರಾಜಕೀಯ ನಾಯಕರು ಬರಲಿದ್ದಾರೆ.

ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ರಣದೀಪ್ ಸುರ್ಜೇವಾವಾಲಾ ಸೇರಿದಂತೆ ಹಲವು ಕೇಂದ್ರ ನಾಯಕರು ಆಗಮಿಸುವ ಸಾಧ್ಯತೆಯಿದೆ, ಇನ್ನೂ ರಾಜ್ಯದ ಸಿಎಂ ಬಿಎಸ್ ಡಿಯೂರಪ್ಪ, ಡಿಸಿಎಂಗಳು ಹಾಗೂ ಸಚಿವರು ಕೂಡ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇಬ್ಬರು ರಾಜಕೀಯ ನಾಯಕರುಗಳ ಕುಟುಂಬದ ಕಡೆಯಿಂದ ಎಲ್ಲಾ ಪ್ರತಿಷ್ಠಿತ ರಾಜಕಾರಣಿಗಳಿಗೆ ಆಹ್ವಾನ ನೀಡಲಾಗಿದೆ, ಶಿವಕುಮಾರ್ ಪುತ್ರಿ ಐಶ್ವರ್ಯ ಮತ್ತು ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ದಾರ್ಥ ಹೆಗ್ಡೆ ಪುತ್ರ ಅಮಾರ್ಥ್ಯ ಸಿದ್ದಾರ್ಥ್ ವಿವಾಹ ಕಾರ್ಯಕ್ರಮಕ್ಕೆ ದೆಹಲಿಯಿಂದ ಹಲವು ಕಾಂಗ್ರೆಸ್ ನಾಯಕರು ಆಗಮಿಸಲಿದ್ದಾರೆ.

ಕೊರೊನಾ ಕಾರಣದಿಂದಾಗಿ ಮಾಜಿ ಸಿಎಂ ಎಸ್ ಎಂ ಕೃಷ್ಣ ಪತ್ರದ ಮೂಲಕ ಆಹ್ವಾನ ನೀಡುತ್ತಿದ್ದಾರೆ, ಸಾಮಾಜಿಕ ದೂರ, ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳೊಂದಿಗೆ ಕಟ್ಟುನಿಟ್ಟಾದ ಕೋವಿಡ್ ಮಾನದಂಡಗಳು ಜಾರಿಯಲ್ಲಿರುತ್ತವೆ ಎಂದು ಸಂಘಟಕರು ತಿಳಿಸಿದ್ದಾರೆ.

ಮದುವೆಗೆ 800 ಮಂದಿ,ಹಾಗೂ ಆರತಕ್ಷತೆಗೆ 1400 ಮಂದಿಗೆ ಮಾತ್ರ ಅವಕಾಶವಿದೆ. ಕೊರೊನಾ ಕಾರಣದಿಂದಾಗಿ ಸಾಮಾಜಿಕ ಅಂತರ ಮತ್ತು ಮುಂಜಾಗ್ರತಾ ಕ್ರಮ ಪಾಲಿಸುವುದು ಕಡ್ಡಾಯವಾಗಿದೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ವಿವಾಹ ಕಾರ್ಯಕ್ರ ಜರುಗಲಿದ್ದು, ಫೆಬ್ರವರಿ 17 ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ, ಎರಡು ಕುಟುಂಬದವರು ಈಗಾಗಲೇ ಆಹ್ವಾನ ಪತ್ರಿಕೆಗಳನ್ನು ಹಂಚುತ್ತಿದ್ದಾರೆ.


Spread the love

About Laxminews 24x7

Check Also

ಫಾರೆಸ್ಟ್ ಗಾರ್ಡ್ ನಿಗೂಢವಾಗಿ ನಾಪತ್ತೆ, 6 ದಿನ ಕಳೆದರೂ ಸಿಗದ ಸುಳಿವು

Spread the loveಚಿಕ್ಕಮಗಳೂರು, ಜುಲೈ 02: ಜಿಲ್ಲೆಯ ಕಡೂರು (Kadur) ತಾಲೂಕಿನ ನೀಲಗಿರಿ ಪ್ಲಾಂಟೇಶನ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಫಾರೆಸ್ಟ್ ಗಾರ್ಡ್ (forest guard) ನಿಗೂಢವಾಗಿ ನಾಪತ್ತೆಯಾಗಿರುವಂತಹ ಘಟನೆ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ