ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಒಂದು ಕೋಟಿ ಹೊಸ ಸಿಲಿಂಡರ್ ಸಂಪರ್ಕ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಉಜ್ವಲಾ ಯೋಜನೆಯಡಿ ಅನಿಲ ಸಂಪರ್ಕ ನೀಡಲಾಗುವುದು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಸಿಲಿಂಡರ್ ಸಂಪರ್ಕ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ಪಿಎಂ ಉಜ್ವಾಲಾ ಯೋಜನೆಯಡಿ ಬಡ ಕುಟುಂಬಗಳಿಗೆ ಸರ್ಕಾರ ಆರ್ಥಿಕ ನೆರವು ನೀಡುತ್ತದೆ. ಇದರಲ್ಲಿ 1600 ರೂಪಾಯಿಗಳನ್ನು ಸರ್ಕಾರ ನೀಡುತ್ತಿದೆ. ಎಲ್‌ಪಿಜಿ ಗ್ಯಾಸ್ ಸಂಪರ್ಕವನ್ನು ಖರೀದಿಸಲು ಈ ಹಣವನ್ನು ನೀಡಲಾಗುತ್ತದೆ. ಒಲೆ ಖರೀದಿಸಲು ಮತ್ತು ಎಲ್‌ಪಿಜಿ ಸಿಲಿಂಡರನ್ನು ಮೊದಲ ಬಾರಿಗೆ ಖರೀದಿಸಲು ಬೇಕಾದ ಹಣವನ್ನು ಸರ್ಕಾರ ನೀಡುತ್ತದೆ.
ಉಜ್ವಾಲಾ ಯೋಜನೆಯಡಿ, ಬಿಪಿಎಲ್ ಕುಟುಂಬದ ಯಾವುದೇ ಮಹಿಳೆ ಅನಿಲ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, ಕೆವೈಸಿ ಫಾರ್ಮ್ ಭರ್ತಿ ಮಾಡಿ ಮತ್ತು ಅದನ್ನು ಎಲ್ಪಿಜಿ ಕೇಂದ್ರಕ್ಕೆ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಎಷ್ಟು ಕೆ.ಜಿ. ಸಿಲಿಂಡರ್ ಬೇಕೆಂಬುದನ್ನು ನಮೂದಿಸಬೇಕು. ಪ್ರಧಾನ್ ಮಂತ್ರಿ ಉಜ್ವಾಲಾ ಯೋಜನೆಯ ವೆಬ್‌ಸೈಟ್‌ನಿಂದ ಉಜ್ವಾಲಾ ಯೋಜನೆಯ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಇಲ್ಲವೆ ಅರ್ಜಿಯನ್ನು ಎಲ್ಪಿಜಿ ಕೇಂದ್ರದಿಂದ ತೆಗೆದುಕೊಳ್ಳಬಹುದು.
ಬಿಪಿಎಲ್ ಕಾರ್ಡ್, ಬಿಪಿಎಲ್ ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಯ ನಕಲು, ಗೆಜೆಟೆಡ್ ಅಧಿಕಾರಿಯಿಂದ ಪರಿಶೀಲಿಸಲ್ಪಟ್ಟ ಸ್ವಯಂ ಘೋಷಣೆ ಪತ್ರವನ್ನು ನೀಡಬೇಕು. ಈ ಯೋಜನೆಗೆ ಕುಟುಂಬ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳಾಗಿರಬೇಕು. ಅರ್ಜಿದಾರಳ ಕುಟುಂಬ ಬಡತನ ರೇಖೆಗಿಂತ ಕೆಳಗಿರಬೇಕು. ಅರ್ಜಿದಾರ ಯಾವುದೇ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರಬೇಕು. ಅರ್ಜಿದಾರರ ಹೆಸರಿನಲ್ಲಿ ಈಗಾಗಲೇ ಯಾವುದೇ ಎಲ್ಪಿಜಿ ಅನಿಲ ಸಂಪರ್ಕ ಇರಬಾರದು.