Breaking News

ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಕಂಬಳ

Spread the love

ಕೋವಿಡ್ ನಿಯಮಗಳ ನಡುವೆ ಕರಾವಳಿಯಲ್ಲಿ ಕಂಬಳ ಕ್ರೀಡೆ ಅದ್ಧೂರಿಯಾಗಿ ನಡೆಯುತ್ತಿದೆ. ಮಂಗಳೂರು ನಗರ ಹೊರವಲಯದ ಐಕಳದಲ್ಲಿ ಎರಡನೇ ಕಂಬಳ ಕ್ರೀಡೆ ಭಾರೀ ವಿಜೃಂಭಣೆಯಿಂದ ಜರುಗಿದೆ. ಈ ಕಂಬಳ ಕೂಟ ಐತಿಹಾಸಿಕ ದಾಖಲೆಯ ಜೊತೆ ಭಾವನಾತ್ಮಕ ಸನ್ನಿವೇಶಕ್ಕೂ ಸಾಕ್ಷಿಯಾಗಿದೆ.

ಹೌದು..ಮಂಗಳೂರು ಹೊರವಲಯದ ಐಕಳ ಎಂಬಲ್ಲಿ ನಡೆದ ಕಂಬಳ ಎರಡು ಘಟನೆಗಳಿಗೆ ಸಾಕ್ಷಿಯಾಯಿತು. ಒಂದು 100 ಮೀ ದೂರವನ್ನು 9.15 ಸೆಕೆಂಡಲ್ಲಿ ಬೈಂದೂರಿನ ವಿಶ್ವನಾಥ್ ಕೋಣಗಳನ್ನು ಓಡಿಸಿ ನೂತನ ದಾಖಲೆ ಮಾಡಿದ್ರೆ, ಇನ್ನೊಂದು ಕಂಬಳ ಇತಿಹಾಸದಲ್ಲೇ ದಾಖಲೆ ಬರೆದಿರುವ ಚೆನ್ನ ಎಂಬ ಕೋಣಕ್ಕೆ ಸನ್ಮಾನ ಕಾರ್ಯಕ್ರಮ ಮಾಡುವ ಮೂಲಕ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು.

ಕಳೆದ ವರ್ಷ ಇದೇ ಐಕಳಬಾವ ಕಂಬಳದಲ್ಲಿ ಕೋಣಗಳನ್ನು 9.55 ಸೆಕೆಂಡ್‌ನಲ್ಲಿ 100 ಮೀ ಓಡಿಸುವ ಮೂಲಕ ಶ್ರೀನಿವಾಸ್ ಗೌಡ ದಾಖಲೆ ಮಾಡಿದ್ದರು. ಆದರೆ ಈ ಬಾರಿ ಕಂಬಳದ ಹುಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ್ ಗೌಡ ದಾಖಲೆಯನ್ನು ಬೈಂದೂರಿನ ವಿಶ್ವನಾಥ್ ಮುರಿದಿದ್ದಾರೆ. 9.15 ಸೆಕೆಂಡಲ್ಲಿ ಓಡಿಸುವ ಮೂಲಕ ವಿಶ್ವನಾಥ್ ಹೊಸ ದಾಖಲೆ ಮಾಡಿದ್ದಾರೆ.

ಇನ್ನು ಈ ಐಕಳ ಕಂಬಳ ಕೂಟದಲ್ಲಿ ವಿಶೇಷವಾಗಿ ಕಂಬಳ ಇತಿಹಾಸದ ದಾಖಲೆಗಳ ಸರದಾರ ಚೆನ್ನ ಎಂಬ ಕೋಣಕ್ಕೆ ಸನ್ಮಾನ ಕಾರ್ಯಕ್ರಮ ನಡೆಯಿತು. ಬರೋಬ್ಬರಿ 164 ಚಿನ್ನದ ಪದಕಗಳನ್ನು ಗಳಿಸಿರುವ ಕೊಳಚ್ಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ ಎಂಬುವವರಿಗೆ ಸೇರಿದ ಕೋಣ ಇದಾಗಿದ್ದು, ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಚೆನ್ನ ಎಂಬ ಕೋಣಕ್ಕೆ ಸನ್ಮಾನ ಮಾಡಲಾಯಿತು. ಮಂಗಳೂರು ನೂತನ ಪೊಲೀಸ್ ಕಮೀಷನರ್ ಎನ್‌.ಶಶಿಕುಮಾರ್ ಕೂಡಾ ಸಾಮಾನ್ಯ ಪ್ರೇಕ್ಷಕರಂತೆ ಕುಟುಂಬ ಸಮೇತವಾಗಿ ಬಂದು ಕಂಬಳವನ್ನು ನೋಡಿ ಸಂಭ್ರಮಪಟ್ಟರು.


Spread the love

About Laxminews 24x7

Check Also

ಶಿಂಗಾರಕೊಪ್ಪ ಏತ ನೀರಾವರಿ ಯೋಜನೆಯಡಿ ರೂ. 57 ಲಕ್ಷ ವೆಚ್ಚದಲ್ಲಿ ಸೇವಾ ರಸ್ತೆ ಕಾಮಗಾರಿಗೆ ಚಾಲನೆ

Spread the loveಸವದತ್ತಿ: ಶಿಂಗಾರಕೊಪ್ಪ ಏತ ನೀರಾವರಿ ಯೋಜನೆಯಡಿ ರೂ. 57 ಲಕ್ಷ ವೆಚ್ಚದಲ್ಲಿ ಸೇವಾ ರಸ್ತೆ ಕಾಮಗಾರಿಗೆ ಚಾಲನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ