Breaking News

ಏಷ್ಯಾದ ಅತೀ ದೊಡ್ಡ ಏರ್​ ಶೋಗೆ ವಿಶೇಷ ಭದ್ರತೆ ನೀಡಿದ್ದು ಗುರುಡ ಪಡೆ

Spread the love

ಬೆಂಗಳೂರು: ಫೆಬ್ರವರಿ 3 ರಿಂದ ಮೂರು ದಿನಗಳ ಕಾಲ ನಡೆದ ಏಷ್ಯಾದ ಅತೀ ದೊಡ್ಡ ಏರ್​ ಶೋ ಶುಕ್ರವಾರ ಮುಕ್ತಾಯವಾಯಿತು. ಈ ಏರ್​ ಶೋಗೆ ಭಯೋತ್ಪಾದನೆ ನಿಗ್ರಹದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಗರುಡ ಸೈನ್ಯ ಭದ್ರತೆಯನ್ನ ಒದಗಿಸಿತ್ತು.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಚೀಫ್ ಆಫ್ ಡಿಫೆನ್ಸ್​ ಸ್ಟಾಪ್​ ಜನರಲ್ ಬಿಪಿನ್ ರಾವತ್ ಮತ್ತು ಮೂವರು ಸೇನಾ ಮುಖ್ಯಸ್ಥರು ಮತ್ತು ರಕ್ಷಣಾ ಮಂತ್ರಿಗಳು ಮತ್ತು ಇತರರು ಭಾಗವಹಿಸಿದ್ದ ಪ್ರದರ್ಶನದಲ್ಲಿ ಗರುಡ್​ ಸೈನ್ಯವನ್ನ ನಿಯೋಜಿಸಲಾಗಿತ್ತು. ಕಾರ್ಯಕ್ರಮ ಆಯೋಜನೆಗೊಂಡಿರುವ ಸ್ಥಳ ಹಾಗೂ ಅಲ್ಲಿರುವ ಸುತ್ತಮುತ್ತ ಇರುವ ಎತ್ತರದ ಕಡ್ಡಗಳ ಮೇಲಿಂದ ಕಣ್ಗಾವಲು ಇಟ್ಟು ಮಾನಿಟರ್ ಮಾಡುತಿತ್ತು.

ದೇಶದ ಯಂಗೆಸ್ಟ್​ ಸ್ಪೆಸಲ್ ಫೋರ್ಸ್​​ ಅಂದ್ರೆ ಗರುಡ. ಇದು ಏರ್​​ ಫೋರ್ಸ್​​ಗೆ ತನ್ನದೇ ಆದ ಹಲವು ಸೇವೆಗಳನ್ನ ಸಲ್ಲಿಸುತ್ತಿದೆ. ಇದು ಸದ್ಯ ಚೀನಾ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕಳೆದ ಮಾರ್ಚ್​ ಮತ್ತು ಏಪ್ರಿಲ್​​ನಲ್ಲಿ ನಡೆದ ಉದ್ವಿಗ್ನತೆ ಬಳಿಕ ಗಡಿ ಕಾವಲಿಗೆ ನಿಯೋಜನೆ ಮಾಡಲಾಗಿದೆ.

2017ರಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದಕ ಜಾಕಿ ಉರ್ ರೆಹಮಾನ್ ಲಖ್ವಿ ಸೋದರಳಿಯ ಸೇರಿದಂತೆ ಸುಮಾರು 10 ಕ್ಕೂ ಹೆಚ್ಚು ಉಗ್ರರನ್ನ ಗರುಡ ತಂಡ ಸದೆಬಡಿದಿದೆ. ಈ ಮೂಲಕ ಭಾರತೀಯ ಸೇನೆಯೊಂದಿಗೆ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಗರುಡ ತಂಡ ತನ್ನ ಸಾಮರ್ಥ್ಯವನ್ನ ಸಾಬೀತುಪಡಿಸಿದೆ. ಅಲ್ಲದೇ ಈ ಪಡೆಗೆ ಅಶೋಕ ಚಕ್ರ ಸೇರಿದಂತೆ ಹಲವು ಶೌರ್ಯ ಪ್ರಶಸ್ತಿಗಳು ಒಲಿದು ಬಂದಿದೆ.


Spread the love

About Laxminews 24x7

Check Also

ಗ್ರಾಮ ಪಂಚಾಯಿತಿಗಳಿಗೆ ‘ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ’ ಎಂದು ಮರುನಾಮಕರಣ

Spread the loveಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ದಾಖಲೆಯ 17ನೇ ರಾಜ್ಯ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ