Breaking News

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕಾರಣವೇನು ಗೊತ್ತಾ?

Spread the love

ನವದೆಹಲಿ: ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಾಖಲೆಯ ಏರಿಕೆಯನ್ನ ಕಾಣ್ತಿದ್ದು, ಇಂಧನ ಚಿಲ್ಲರೆ ಮಾರಾಟಗಾರರು ಬೆಲೆಗಳನ್ನ ಮೇಲ್ಮುಖವಾಗಿ ಪರಿಷ್ಕರಿಸಿದ್ದಾರೆ. ಫೆಬ್ರವರಿ 6ರಂದು ನವದೆಹಲಿಯಲ್ಲಿ ಪೆಟ್ರೋಲ್ ದರ 86.95 ರೂಪಾಯಿ ಇದ್ರೆ, ಮುಂಬೈನಲ್ಲಿ 93.49 ರೂ. ಆಗಿದೆ. ಇನ್ನು ಬೆಂಗಳೂರಿನಲ್ಲಿ 89.85 ರೂ. ಇದ್ರೆ, ಚೆನ್ನೈನಲ್ಲಿ 89.39 ರೂ.ಗಳಾಗಿದೆ.

ತೆರಿಗೆ ಕೈಯಲ್ಲಿರುವ ಕಾರಣ ಈ ಬೆಲೆಗಳನ್ನ ಕಡಿಮೆ ಮಾಡಲು ಸರ್ಕಾರ ಮಾತ್ರ ಸಹಾಯ ಮಾಡುತ್ತೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ಮಾರಾಟಗಾರರು ಹೇಳಿದ್ದಾರೆ. ಆದ್ರೆ, ಈ ರೀತಿ ಇಂಧನ ಬೆಲೆ ಏರಿಕೆಗೆ ಕಾರಣಗಳೇನು..?

* ಬ್ರೆಂಟ್ ಕಚ್ಚಾ ತೈಲದ ಬೆಲೆ ಮತ್ತು ಬೇಡಿಕೆಯನ್ನ ಸುಧಾರಿಸುವುದು: ಭಾರತ ತನ್ನ ದೇಶೀಯ ಬೇಡಿಕೆಗಳಲ್ಲಿ ಶೇ.84ರಷ್ಟು ಕಚ್ಚಾ ತೈಲವನ್ನ ಆಮದು ಮಾಡಿಕೊಳ್ಳುತ್ತೆ. ಆದ್ದರಿಂದ ಬ್ರೆಂಟ್ ಕಚ್ಚಾ ತೈಲ ದರಗಳು ದೇಶೀಯ ಇಂಧನ ದರಗಳ ಮೇಲೆ ನೇರವಾದ ಪರಿಣಾಮ ಬೀರುತ್ವೆ. ತೈಲ ಮಾರುಕಟ್ಟೆ ಕಂಪನಿಗಳು ಅಂತಾರಾಷ್ಟ್ರೀಯ ದರಗಳ ಆಧಾರದ ಮೇಲೆ ಇಂಧನ ದರಗಳನ್ನ ಪರಿಷ್ಕರಿಸುತ್ವೆ. ಆದ್ರೆ, ಭಾರತ 2 ತಿಂಗಳಕಾಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಪರಿಷ್ಕರಣೆಯನ್ನು ನಿಲ್ಲಿಸಿದೆ.

* ಜಾಗತಿಕ ಆರ್ಥಿಕತೆಗಳು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಬ್ರೆಂಟ್ ಕಚ್ಚಾ ತೈಲ ದರಗಳು ಏರಿಕೆಯಾಗಿವೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ದೃಷ್ಟಿಕೋನವೂ ಸುಧಾರಿಸಿದೆ ಎನ್ನಲಾಗ್ತಿದೆ.

* ಬ್ರೆಂಟ್ ಕಚ್ಚಾ ತೈಲ ದರ 2019ರ ಆರಂಭದಲ್ಲಿ ಪ್ರತಿ ಬ್ಯಾರೆಲ್ʼಗೆ 66 ಡಾಲರ್ ಇದ್ದಿದ್ದರಿಂದ ಏಪ್ರಿಲ್ʼನಲ್ಲಿ 19 ಡಾಲರ್ ಗೆ ಇಳಿಕೆಯಾಗಿತ್ತು. ಈಗ ಪ್ರತಿ ಬ್ಯಾರೆಲ್ʼಗೆ 50 ಡಾಲರ್ ತಲುಪಿದೆ.

* ‘ಮಧ್ಯಮಾವಧಿಯಲ್ಲಿ ತೈಲ ಬೆಲೆಗಳು ಗಣನೀಯವಾಗಿ ಏರಿಕೆಯನ್ನ ಕಾಣುವುದಿಲ್ಲ. ಆದ್ರೆ, ಪ್ರತಿ ಬ್ಯಾರೆಲ್ʼಗೆ 50-60 ಡಾಲರ್ʼಗಳವರೆಗೆ ತೈಲ ಪೂರೈಕೆ ಮಾಡುವ ಸಾಧ್ಯತೆ ಇದೆ’ ಎಂದು ತೈಲ ಪೂರೈಕೆದಾರ ಕಾರ್ಟೆಲ್ ಒಪೆಕ್ ಹೇಳಿದೆ ಎಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಸಂಸತ್ತಿಗೆ ತಿಳಿಸಿದ್ದಾರೆ.


Spread the love

About Laxminews 24x7

Check Also

ಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ.

Spread the loveಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ. ನಂದಿಹಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ