Breaking News

ಕಾರವಾರದ ಈ ಇಬ್ಬರು PUC ವಿದ್ಯಾರ್ಥಿಗಳ ಸ್ಮಾರ್ಟ್ ಐಡಿಯಾ ಎಲ್ಲಾ ಕಡೆ ಸಖತ್ ವೈರಲ್..

Spread the love

ಮಾನವ ತನ್ನ ಸ್ಮಾರ್ಟ್ ಬುದ್ದಿಯನ್ನು ಉಪಯೋಗಿಸಿಕೊಂಡು ಹೊಸ ಹೊಸ ಅವಿಷ್ಕಾರ ಐಡಿಯಾಗಳನ್ನ ಮಾಡಿ ಈಗ ಎಲ್ಲವನ್ನೂ ಸುಲಲಿತವಾಗಿ ಮಾಡಿಕೊಂಡಿದ್ದಾನೆ.. ಅಮೇರಿಕಾವನ್ನು ಕೂಡ ಪಕ್ಕದವರು ಅನ್ನುವಷ್ಟು ಹತ್ತಿರ ಮಾಡಿಕೊಂಡಿದ್ದಾನೆ. ಈ ಪಿ.ಯು.ಸಿ ವಿದ್ಯಾರ್ಥಿಗಳು ಕೂಡ ಎಲ್ಲರಂತೆ ಎನಾದ್ರೂ ಓದಿ ಒಂದಷ್ಟು ಅಂಕ ಪಡೆದುಕೊಂಡು ಮುಂದೆ ಹೋಗೋಣ ಎಂದು ಆಲೋಚಿಸದೆ ತಮ್ಮ ಬುದ್ದಿವಂತಿಕೆಗೆ ಕೈ ಹಾಕಿ ಒಂದು ಸ್ಮಾರ್ಟ್ ಐಡಿಯಾ ಮಾಡಿ ಇವತ್ತು ಇವರ ಐಡಿಯಾ ಈಗ ಎಲ್ಲಾ ಕಡೆ ವೈರಲ್ ಆಗುವಂತೆ ಮಾಡಿದ್ದಾರೆ..

ಅಷ್ಟಕ್ಕೂ ಇವರು ಮಾಡಿರುವ ಐಡಿಯಾ ಆದ್ರೂ ಏನು ಇವರು ಕಂಡುಹಿಡಿದಿದ್ದು ಏನು ಎಂಬುದರ ಬಗ್ಗೆ ಈ ಮಾಹಿತಿಯಲ್ಲಿ ತಿಳಿಯೋಣ.. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನಂದನಗದ್ದ ವಾಸಿಗಳಾದ ತಾನ್ವಿ ಹಾಗೂ ಕುಲನ್ ನಾಯಕ್ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಪಿ.ಯು.ಸಿ ಓದುತ್ತಿದ್ದಾರೆ.. ತಮ್ಮ ಮನೆಯಿಂದ ಕಾಲೇಜಿಗೆ ಸುಮಾರು 6 ಕಿಲೋಮೀಟರ್ ದೂರ ಆಗಿರೋದ್ರಿಂದ ಪ್ರತಿದಿನ ಸೈಕಲ್‌ ತುಳಿದುಕೊಂಡು ಹೋಗಲು ತುಂಬಾ ಕಷ್ಟವಾಗುತ್ತಿತ್ತು.. ಕೆಲವೊಮ್ಮೆ ಲೇಟ್ ಕೂಡ ಆಗುತ್ತಿತ್ತು. ಬೈಕ್ ಅಥವಾ ಸ್ಕೂಟರ್ ತೆಗೆದುಕೊಳ್ಲೋಣ ಅಂದರೆ ಲೈಸೆನ್ಸ್ ಇಲ್ಲಾ..

ಈ ಕಷ್ಟಗಳನ್ನೆಲ್ಲಾ ನೋಡಿದ ಇವರು ಇದರಿಂದ ಪಾರಾಗಲು ಏನಾದರೂ ಒಂದು ಐಡಿಯಾ ಮಾಡಬೇಕಲ್ಲಾ ಅಂದುಕೊಂಡರು.‌ ಕೊನೆಗೂ ಒಂದು ಸ್ಮಾರ್ಟ್ ಐಡಿಯಾ ಇವರಿಗೆ ಬರುತ್ತದೆ. ಅದು ನಮ್ಮ ಸೈಕಲ್ ಅನ್ನು ಸ್ಕೂಟರ್ ಮಾಡಿಕೊಂಡರೆ ಹೇಗೆ ಅನ್ನೋದು.. ಐಡಿಯಾ ಬಂದಿದ್ದೆ ತಡ. ಮಾಹಿತಿಯನ್ನು ಕಲೆ ಹಾಕಿದ ಕುಲನ್ ಮತ್ತು ತಾನ್ವಿ ಕೊನೆಗೂ ತಮ್ಮ ಗುರಿಯನ್ನ ಸಾಧಿಸಿದ್ದಾರೆ. 12 ವ್ಯಾಟ್ ಇರುವ ಎರಡು ಬ್ಯಾಟರಿಗಳನ್ನ ಡಿಸಿ ಮೋಟರ್ ಗೆ ಕನೆಕ್ಟ್ ಮಾಡಿದ ಇವರು ಅದಕ್ಕೆ ಪ್ರತ್ಯೇಕ ಚೈನ್ ಜೊಡಿಸಿ.. ಸೈಕಲ್ ಹ್ಯಾಂಡ್ ಗೆ ಎಕ್ಸಲೇಟರ್ ಪಿಕ್ಸ್ ಮಾಡಿದ್ದಾರೆ.

ಆಗೆ ಬೈಕ್‌ ರೀತಿ ಕೀ ಕೂಡ ಅಳವಡಿಸಿದ್ದು.. ಕೀಯಿಂದ ಆನ್ ಮಾಡಿ ಎಕ್ಸಲೇಟರ್ ಕೊಟ್ಟರೆ ಸಾಕು. ಸೈಕಲ್ ಜುಮ್ ಅಂತ‌ ಹೋಡುತ್ತದೆ.. ಒಂದು ಹೆಡ್ ಲೈಟ್ ನಾಲ್ಕು ಹಿಂಡಿಕೇಟರ್ ಆರನ್.. ಈಗೆ ಎಲ್ಲವನ್ನು ಪಿಕ್ಸ್ ಮಾಡಲಾಗಿದ್ದು.. ನಾಲ್ಕು ಗಂಟೆ ಚಾರ್ಜ್ ಮಾಡಿದರೆ ಸಾಕು 30 ಕಿಲೋಮೀಟರ್ ವರೆಗೂ ಓಡಿಸಬಹುದು.. ಇಂತಹ ಸೈಕಲ್ ತಗೋಬೇಕು ಅಂದರೆ ಏನಿಲ್ಲಾ ಅಂದರು 50 ಸಾವಿರ ರುಪಾಯಿ ಬೇಕು. ಆದರೆ ಇವರು ಸ್ಮಾರ್ಟ್ ಐಡಿಯಾ ಮಾಡಿ 16 ಸಾವಿರಕ್ಕೆ ಬ್ಯಾಟರಿ ಚಾಲಿತ ಸೈಕಲ್ ಅನ್ನು ರೆಡಿ ಮಾಡಿರೋದು ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಈ ಪ್ರಯತ್ನ ಮುಂದೆ ಹೊಸ ಹೊಸ ಆವಿಷ್ಕಾರಗಳಿಗೆ ನಾಂದಿ ಆಗಲಿ. ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡಿರುವ ತಾನ್ವಿ ಹಾಗೂ ಕುನಾಲ್ ಗೆ ನಿಮ್ಮದೊಂದು ಶುಭಾಶಯ ಇರಲಿ..


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ