Breaking News

ವಿಶ್ವದ ಮೊದಲ ಹೈಬ್ರಿಡ್ ಏರ್ ಶೋ ಇಂದಿನಿಂದ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ.

Spread the love

ಬೆಂಗಳೂರು : ವಿಶ್ವದ ಮೊದಲ ಹೈಬ್ರಿಡ್ ಏರ್ ಶೋ ಇಂದಿನಿಂದ ಬೆಂಗಳೂರಿನ ವಾಯುನೆಲೆಯಲ್ಲಿ ನಡೆಯುತ್ತಿದ್ದು, ಈ ಏರೋ ಇಂಡಿಯಾ ಶೋಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ರಾಜನಾಥ್ ಸಿಂಗ್, ಏರ್ ಶೋ ನಮ್ಮ ದೇಶದ ಶಕ್ತಿ ಪ್ರದರ್ಶನದ ವೇದಿಕೆಯಾಗಿದೆ. ವಿಶ್ವದ ಮೊಟ್ಟ ಮೊದಲ ಹೈಬ್ರಿಡ್ ಏರ್ ಶೋ ಇದಾಗಿದೆ. ಭಾರತೀಯ ತಯಾರಿಕೆಯ ತೇಜಸ್ ಯುದ್ಧ ವಿಮಾನಕ್ಕೆ ಸಾಕಷ್ಟು ಬೇಡಿಕೆಯಿದೆ. ಈಗಾಗಲೇ 83 ತೇಜಸ್ ವಿಮಾನಗಳಿಗೆ ಅರ್ಡರ್ ಬಂದಿದ್ದು, ಇದು ಅತ್ಯಂತ ಸಂತಸದ ವಿಚಾರವಾಗಿದೆ ಎಂದು ಹೇಳಿದರು.

ಇನ್ನು ಇಡೀ ವಿಶ್ವವೇ ಕೊರೊನಾದಿಂದ ತತ್ತರಿಸಿದೆ. ನಮ್ಮ ದೇಶದಲ್ಲೇ ತಯಾರಾದ ಎರಡು ಲಸಿಕೆಗಳು ಬೇರೆ ಬೇರೆ ದೇಶಗಳಲ್ಲೂ ಜೀವ ಉಳಿಸುವ ಕೆಲಸ ಮಾಡುತ್ತಿವೆ. ನಾವು 217 ಮಿಲಿಯನ್ ಜನರಿಗೆ ಕೋವಿಡ್ ಲಸಿಕೆ ನೀಡುವ ಕೆಲಸ ಮಾಡಿದ್ದೇವೆ ಎಂದರು.


Spread the love

About Laxminews 24x7

Check Also

ಲಾರಿ- ಖಾಸಗಿ ಬಸ್‌ ಡಿಕ್ಕಿ: 13 ಮಂದಿ ಸಜೀವ ದಹನ

Spread the loveಆಂಧ್ರ ಪ್ರದೇಶ: ಆಂಧ್ರದ ಮಾರ್ಕಪುರಂ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಾಯವರಂ ಬಳಿಯ ಪಲಕಲಾ ಎಂಬಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ