Breaking News

ತಮಿಳು ನಟ ಸಿಂಬು ಹೊಸ ಚಿತ್ರಕ್ಕೆ ಸಾಥ್ ನೀಡಿದ ಕಿಚ್ಚ ಸುದೀಪ್

Spread the love

ತಮಿಳು ನಟ ಸಿಂಬು ಅಭಿನಯಿಸಿರುವ ಹೊಸ ಚಿತ್ರಕ್ಕೆ ಪ್ಯಾನ್ ಇಂಡಿಯಾ ಸ್ಟಾರ್ಸ್ ಸಾಥ್ ನೀಡುತ್ತಿದ್ದಾರೆ. ಸಿಂಬು ನಟಿಸಿರುವ ‘ಮಾನಡು’ ಸಿನಿಮಾ ಬಹುಭಾಷೆಯಲ್ಲಿ ತೆರೆಕಾಣಲು ಸಜ್ಜಾಗಿದ್ದು, ಸ್ಟಾರ್ ನಟರು ಹಾಗೂ ಸ್ಟಾರ್ ಮೇಕರ್ಸ್ ಕೈ ಜೋಡಿಸಿದ್ದಾರೆ.

ಫೆಬ್ರವರಿ 3 ರಂದು ಸಿಂಬು ಅವರ ಮಾನಡು ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಐದು ಭಾಷೆಯಲ್ಲಿ ಮಾನಡು ಟೀಸರ್ ಬಿಡುಗಡೆಯಾಗುತ್ತಿದ್ದು, ಕನ್ನಡದಲ್ಲಿ ಕಿಚ್ಚ ಸುದೀಪ್ ರಿಲೀಸ್ ಮಾಡಲಿದ್ದಾರೆ. ಮಧ್ಯಾಹ್ನ 2.34 ಗಂಟೆಗೆ ಮಾನಡು ಕನ್ನಡ ಟೀಸರ್ ಅನಾವರಣ ಮಾಡಲಿದ್ದಾರೆ.

ತೆಲುಗಿನಲ್ಲಿ ನಟ ರವಿತೇಜ ಮಾನಡು ಟೀಸರ್ ರಿಲೀಸ್ ಮಾಡುತ್ತಿದ್ದಾರೆ. ಮಲಯಾಳಂ ಭಾಷೆಯಲ್ಲಿ ಪೃಥ್ವಿರಾಜ್ ಸುಕುಮಾರ್ ಬಿಡುಗಡೆ ಮಾಡುತ್ತಿದ್ದಾರೆ. ಹಾಗೂ ಹಿಂದಿಯಲ್ಲಿ ಸ್ಟಾರ್ ನಿರ್ದೇಶಕ ಅನುರಾಗ್ ಕಶ್ಯಪ್ ಸಾಥ್ ನೀಡುತ್ತಿದ್ದಾರೆ.

ಅಂದ್ಹಾಗೆ, ಮಾನಡು ಸಿನಿಮಾ ರಾಜಕೀಯ ಥ್ರಿಲ್ಲರ್ ಕಥೆ ಹೊಂದಿದೆ. ವೆಂಕಟ್ ಪ್ರಭು ಈ ಚಿತ್ರ ನಿರ್ದೇಶಿಸಿದ್ದು, ಸುರೇಶ್ ಕೆ ನಿರ್ಮಾಣ ಮಾಡಿದ್ದಾರೆ.

ಸಿಂಬು ಜೊತೆ ಕಲ್ಯಾಣಿ ಪ್ರಿಯಾದರ್ಶನಿ, ಎಸ್‌ಜೆ ಸೂರ್ಯ, ಭಾರತೀರಾಜ, ಎಸ್‌ಎ ಚಂದ್ರಶೇಖರ್, ಕರುಣಾಕರ್ಣನ್, ಮನೋಜ್ ಭಾರತೀರಾಜ, ಉದಯ, ಅರವಿಂದ್ ಆಕಾಶ್, ರವಿಕಾಂತ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ತಾರಬಳಗದಲ್ಲಿದ್ದಾರೆ.


Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ