Breaking News

ಸ್ಪ್ಯಾನಿಷ್ ಸಿನಿಮಾ ರೀಮೇಕ್ ನಲ್ಲಿ ಅಮೀರ್ ಖಾನ್?

Spread the love

ತಾವು ನಟಿಸುವ ಸಿನಿಮಾಗಳ ಕತೆಗಳನ್ನು ಬಹಳ ಜಾಗರೂಕತೆಯಿಂದ ಆಯ್ಕೆ ಮಾಡಿಕೊಳ್ಳುತ್ತಾರೆ ನಟ ಅಮೀರ್ ಖಾನ್. ಅವರು, ರೀಮೇಕ್ ಸಿನಿಮಾಗಳಲ್ಲಿ ನಟಿಸುವುದು ಬಹಳ ಅಪರೂಪ.

ರೀಮೇಕ್ ಸಿನಿಮಾ ಗಜಿನಿಯಲ್ಲಿ ನಟಿಸಿದ್ದ ಅಮೀರ್ ಖಾನ್, ಪ್ರಸ್ತುತ, ಹಾಲಿವುಡ್ ಸಿನಿಮಾ ‘ಫಾರೆಸ್ಟ್ ಗಂಫ್’ ಸಿನಿಮಾದ ರೀಮೇಕ್ ನಲ್ಲಿ ನಟಿಸುತ್ತಿದ್ದಾರೆ.

ಈ ನಡುವೆ ಸ್ಪ್ಯಾನಿಷ್ ಸಿನಿಮಾದ ರೀಮೇಕ್ ನಲ್ಲಿ ನಟಿಸುವಂತೆ ಅಮೀರ್ ಖಾನ್ ಅವರನ್ನು ಸಂಪರ್ಕ ಮಾಡಲಾಗಿದೆ. ಅಮೀರ್ ಖಾನ್‌ಗೂ ಕತೆ ಇಷ್ಟವಾಗಿದೆ ಎನ್ನಲಾಗುತ್ತಿದೆ.

ಸ್ಪ್ಯಾನಿಷ್ ನ ಪ್ರಶಸ್ತಿ ವಿಜೇತ ಸಿನಿಮಾ, ‘ಚಾಂಪಿಯನ್ಸ್’ ಅಥವಾ ‘ಚಾಂಪ್ಸ್’ ನ ಹಿಂದಿ ರೀಮೇಕ್‌ನಲ್ಲಿ ನಟಿಸಲು ಅಮೀರ್ ಖಾನ್‌ ಅವರನ್ನು ಕೇಳಲಾಗಿದೆ. ಈ ಸಿನಿಮಾದಲ್ಲಿ ಅಮೀರ್ ಖಾನ್ ಬಾಸ್ಕೆಟ್‌ಬಾಲ್ ಕೋಚ್ ಪಾತ್ರದಲ್ಲಿ ನಟಿಸಲು ಕೋರಲಾಗಿದೆ.

‘ಶುಭ್ ಮಂಗಲ್ ಸಾವಧಾನ್’ ನಿರ್ದೇಶಿಸಿರುವ ಆರ್‌ಎಸ್ ಪ್ರಸನ್ನ ಈ ಸಿನಿಮಾವನ್ನು ನಿರ್ದೇಶಿಸಲಿದ್ದು, ಈಗಾಗಲೇ ಅಮೀರ್ ಖಾನ್ ಅವರೊಟ್ಟಿಗೆ ಎರಡು ಹಂತದ ಮಾತುಕತೆ ಮಾಡಲಾಗಿದೆ.

ಸ್ಪ್ಯಾನಿಷ್ ನ ‘ಚಾಂಪಿಯನ್ಸ್’ ಕ್ಲಾಸಿಕ್ ಸಿನಿಮಾ ಆಗಿದ್ದು, ‘ಒರಟು, ಕುಡುಕ ಬಾಸ್ಕೆಟ್‌ಬಾಲ್ ಕೋಚ್ ಒಬ್ಬನಿಗೆ ನ್ಯಾಯಾಲಯವು ಶಿಕ್ಷೆಯ ರೂಪದಲ್ಲಿ ಸಮುದಾಯಕ್ಕೆ ಸಹಾಯ ಮಾಡುವಂತೆ ಸೂಚಿಸುತ್ತದೆ. ಆಗ ಬಾಸ್ಕೆಟ್‌ಬಾಲ್ ಕೋಚ್ ಬುದ್ಧಿಮಾಂದ್ಯ ಯುವಕರಿಗೆ ಬಾಸ್ಕೆಟ್ ಬಾಲ್ ಹೇಳಿಕೊಡುತ್ತಾನೆ’ ಇದು ಸಿನಿಮಾದ ಕತೆ.


Spread the love

About Laxminews 24x7

Check Also

ಶಾಲಾ ತರಗತಿ ಕೊಠಡಿಗಳನ್ನು ಉದ್ಘಾಟಿಸಿದ ರಾಹುಲ್  ಜಾರಕಿಹೊಳಿ

Spread the loveಇವತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ