Breaking News

ಶೂಟಿಂಗ್ ಶುರುವಾದ ಮೊದಲ ದಿನವೇ ಆದಿಪುರುಷ್ ಸೆಟ್‌ನಲ್ಲಿ ಬೆಂಕಿ ಅವಘಡ

Spread the love

ಪ್ರಭಾಸ್ ನಟನೆಯ ಪೌರಾಣಿಕ ಚಿತ್ರ ಆದಿಪುರುಷ್ ಅಧಿಕೃತವಾಗಿ ಸೆಟ್ಟೇರಿದೆ. ಸಿನಿಮಾ ಆರಂಭವಾದ ಮೊದಲ ದಿನವೇ ಚಿತ್ರಕ್ಕೆ ವಿಘ್ನ ಎದುರಾಗಿದೆ. ಚಿತ್ರದ ಸೆಟ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.

ಮುಂಬೈನ ಗೋರೆಗಾಂವ್ ಪ್ರದೇಶದ ಇನೋರ್ಬಿಟ್ ಮಾಲ್‌ನ ಹಿಂಭಾಗದಲ್ಲಿರುವ ರೆಟ್ರೊ ಮೈದಾನದಲ್ಲಿ ಆದಿಪುರುಷ್ ಸಿನಿಮಾದ ಚಿತ್ರೀಕರಣ ನಡೆಸಲು ಸಿದ್ಧತೆ ನಡೆದಿತ್ತು. ಸೆಟ್‌ನಲ್ಲಿ ಸುಮಾರು ಐವತ್ತರಿಂದ ಅರವತ್ತು ಜನರು ಹಾಜರಿದ್ದರು. ಸಂಜೆ 4: 13ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಬಾಲಿವುಡ್‌ ಮಾಧ್ಯಮಗಳು ವರದಿ ಮಾಡಿದೆ.

‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿರುವಂತೆ ಘಟನೆ ನಡೆದ ಸ್ಥಳಕ್ಕೆ ಎಂಟು ಅಗ್ನಿಶಾಮಕ ವಾಹನ, ಐದು ಜಂಬೋ ಟ್ಯಾಂಕರ್‌ಗಳು, ಒಂದು ವಾಟರ್ ಟ್ಯಾಂಕರ್ ಮತ್ತು ಜೆಸಿಬಿ ಆಗಮಿಸಿತ್ತು. ಅಗ್ನಿಶಾಮಕ ದಳ ನೀಡಿರುವ ಮಾಹಿತಿ ಪ್ರಕಾರ ಘಟನೆಯಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ.

ಬೆಂಕಿ ಕಾಣಿಸಿಕೊಂಡಾಗ ಪ್ರಭಾಸ್ ಮತ್ತು ಸೈಫ್ ಅಲಿ ಖಾನ್ ಸೆಟ್‌ನಲ್ಲಿ ಇರಲಿಲ್ಲ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ಘಟನೆ ನಡೆದ ವೇಳೆ ಚಿತ್ರದ ನಿರ್ದೇಶಕ ಓಂ ರೌತ್ ಮತ್ತು ಮರಾಠಿ ನಟ ಸೂರ್ಯ ಅವರು ಈ ಸೆಟ್‌ನಲ್ಲಿದ್ದರು ಎಂದು ತಿಳಿದು ಬಂದಿದೆ. ಕ್ರೋಮಾಕಿಯಿಂಗ್ (chroma key) ಪರದೆ ಬಳಸಿ ಚಿತ್ರೀಕರಣ ಮಾಡಲಾಗುತ್ತಿತ್ತು. ವಿಎಫ್‌ಎಕ್ಸ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಅಂದ್ಹಾಗೆ, ಇಂದು ಬೆಳಗ್ಗೆ ಆದಿಪುರುಷ್ ಚಿತ್ರತಂಡ ಅಧಿಕೃತವಾಗಿ ಮುಹೂರ್ತ ಮಾಡಿ, ಚಿತ್ರೀಕರಣ ಶುರು ಮಾಡಿದೆ. ಇನ್ಸ್ಟಾಗ್ರಾಂನಲ್ಲಿ ಪ್ರಭಾಸ್ ಪೋಸ್ಟ್ ಸಹ ಹಾಕಿದ್ದರು.

ಪ್ರಭಾಸ್ ರಾಮನ ಪಾತ್ರದಲ್ಲಿ, ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕಿ ಯಾರೆಂದು ಅಂತಿಮವಾಗಿಲ್ಲ. ರಾಮನ ತಾಯಿ ಕೌಸಲ್ಯ ಪಾತ್ರದಲ್ಲಿ ಹೇಮಾ ಮಾಲಿನಿ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.


Spread the love

About Laxminews 24x7

Check Also

ವಿಧಾನಸಭೆಯ ಆವರಣದಲ್ಲಿನ ಚಿತ್ರಪಟಗಳ ಉದ್ಘಾಟನೆ ನೆರವೇರಿಸಿದ ಡಿಸಿಎಂ ಡಿ ಕೆ ಶಿವಕುಮಾರ್.

Spread the loveಬೆಂಗಳೂರು: ವಿಧಾನಸಭೆ ನಡೆದು ಬಂದ ದಾರಿ ಕುರಿತು ವಿಧಾನಸಭೆಯ ಹೊರ ಆವರಣದಲ್ಲಿ ಅಳವಡಿಸಲಾಗಿರುವ ಚಿತ್ರಪಟಗಳ ಉದ್ಘಾಟನೆಯನ್ನು ಡಿಸಿಎಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ