Breaking News

ಗ್ರಾಹಕರಿಗೆ ಬಿಗ್‌ ಶಾಕ್:‌ ವಾಣಿಜ್ಯ ‌ʼLPG ಸಿಲೆಂಡರ್ʼ ಬೆಲೆ ಏರಿಕೆ, ಹೊಸ ದರದ ಮಾಹಿತಿ ಇಲ್ಲಿದೆ..!

Spread the love

ತೈಲ ಮಾರುಕಟ್ಟೆ ಕಂಪನಿಗಳು ಎಲ್ ಪಿಜಿ ಸಿಲಿಂಡರ್ ಫೆಬ್ರವರಿ ತಿಂಗಳ ಬೆಲೆಯನ್ನ ಬಿಡುಗಡೆ ಮಾಡಿದ್ದು, ವಾಣಿಜ್ಯ ಎಲ್ ಪಿಜಿ ಸಿಲಿಂಡರ್ (19ಕೆಜಿ) ಬೆಲೆ 190 ರೂ ಹೆಚ್ಚಳವಾಗಿದೆ. ಆದರೆ, ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ (14.2ಕೆ.ಜಿ) ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಹೊಸ ದರಗಳು ಫೆಬ್ರವರಿ 1ರಿಂದ ಜಾರಿಗೆ ಬಂದಿವೆ.

ಡಿಸೆಂಬರ್ ತಿಂಗಳಲ್ಲಿ ಐಒಸಿ ದೇಶೀಯ ಎಲ್ ಪಿಜಿ ದರವನ್ನ ಎರಡು ಬಾರಿ ಏರಿಸಿತ್ತು. ಈ ಹಿಂದೆ ಡಿಸೆಂಬರ್ 2ರಂದು 50 ರೂ.ಗಳನ್ನ ಏರಿಕೆ ಮಾಡಿತ್ತು, ನಂತರ ಡಿಸೆಂಬರ್ 15ರಂದು ಮತ್ತೆ 50 ರೂ. ಏರಿಕೆ ಮಾಡಿತ್ತು.

ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ..! ವಾಣಿಜ್ಯ ಸಿಲಿಂಡರ್ʼಗಳ ಬೆಲೆ ದೆಹಲಿಯಲ್ಲಿ ಈಗ 1,539 ರೂಪಾಯಿಗಳಿಗೆ ಮುಟ್ಟಿದೆ. ಈ ಹಿಂದೆ 1349 ರೂಪಾಯಿ ಇದ್ದ ಸಿಲಿಂಡರ್ ಬೆಲೆ 190 ರೂಪಾಯಿ ಏರಿಕೆಯಾಗಿದೆ. ಮುಂಬೈನಲ್ಲಿ 1297.50 ರೂ.ನಿಂದ 1488 ರೂ.ಗೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಬೆಲೆಗಳು 1410 ರಿಂದ 1604 ರೂಪಾಯಿಗಳಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ 1463.50 ರಿಂದ 1654.50 ರೂ.ಗೆ ಏರಿಕೆಯಾಗಿದೆ.

ಫೆಬ್ರವರಿ 1ರಂದು ಬಜೆಟ್ ಮಂಡನೆಯಾಗುವ ಮುನ್ನ ಎಲ್ ಪಿಜಿ ಸಿಲಿಂಡರ್ ಗಳ ಬೆಲೆ ಗಳು ಹಣದುಬ್ಬರದ ಮೇಲೆ ಪರಿಣಾಮ ಬೀರಲಿವೆ ಎಂಬ ಊಹಾಪೋಹಗಳು ಹರಿದಾಡಿದ್ದವು, ಆದರೆ, ಐಒಸಿ ಸೇರಿದಂತೆ ಇತರ ತೈಲ ಕಂಪನಿಗಳು ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಐಒಸಿ ವೆಬ್ ಸೈಟ್ ಪ್ರಕಾರ 2021ರ ಫೆಬ್ರವರಿಗೆ ಎಲ್ ಪಿಜಿ ಸಿಲಿಂಡರ್ (14.2 ಕೆ.ಜಿ) ಬೆಲೆ ಏರಿಕೆಯಾಗಿಲ್ಲ. ದೆಹಲಿಯಲ್ಲಿ ಎಲ್ ಪಿಜಿ ಸಿಲಿಂಡರ್ ಗಳು ಈಗಲೂ 694 ರೂಪಾಯಿಗಳಿಗೆ ಲಭ್ಯವಿದೆ.

ಈ ರೀತಿಯ LPG ಬೆಲೆಗಳನ್ನು ಪರಿಶೀಲಿಸಿ
ನೀವು ನಿಮ್ಮ ನಗರದ ಗ್ಯಾಸ್ ಸಿಲಿಂಡರ್ ದರವನ್ನ ನಿಮಿಷಗಳಲ್ಲಿ ಪರೀಕ್ಷಿಸಬಹುದು. ಎಲ್ ಪಿಜಿ ಸಿಲಿಂಡರ್ʼಗಳ ಬೆಲೆಯನ್ನ ಪರೀಕ್ಷಿಸಲು, ನೀವು ಸರ್ಕಾರಿ ತೈಲ ಕಂಪನಿಯ ವೆಬ್ ಸೈಟ್ ಗೆ ಹೋಗಬೇಕಾಗುತ್ತದೆ. ಇಲ್ಲಿನ ಕಂಪನಿಗಳು ಪ್ರತಿ ತಿಂಗಳು ಹೊಸ ದರ ಗಳನ್ನ ಪ್ರಕಟಿಸುತ್ವೆ. https://iocl.com/Products/IndaneGas.aspx ಈ ಲಿಂಕ್ ನಲ್ಲಿ ನಿಮ್ಮ ನಗರದ ಗ್ಯಾಸ್ ಸಿಲಿಂಡರ್ ಬೆಲೆಯನ್ನು ನೀವು ಪರೀಕ್ಷಿಸಬಹುದು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ