Breaking News
Home / Uncategorized / ಇಂದು ಸಂಜೆಯಿಂದ ಸೋಮವಾರದ ಬೆಳಗ್ಗೆವರೆಗೆ ಕೊಡಗು ಸಂಪೂರ್ಣ ಲಾಕ್‍ಡೌನ್

ಇಂದು ಸಂಜೆಯಿಂದ ಸೋಮವಾರದ ಬೆಳಗ್ಗೆವರೆಗೆ ಕೊಡಗು ಸಂಪೂರ್ಣ ಲಾಕ್‍ಡೌನ್

Spread the love

ಮಡಿಕೇರಿ: ಇಂದು ಸಂಜೆಯಿಂದ ಸೋಮವಾರದ ಬೆಳಗ್ಗೆವರೆಗೆ ಕೊಡಗಿನಲ್ಲಿ ಸಂಪೂರ್ಣವಾಗಿ ಲಾಕ್‍ಡೌನ್ ಮಾಡುವುದಾಗಿ ಕೊಡಗಿನ ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ತಿಳಿಸಿದ್ದಾರೆ.

ಜಿಲ್ಲೆಗೆ ವಾರಾಂತ್ಯದಲ್ಲಿ ಹೊರಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಜನರು ಬರುತ್ತಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಸಂಜೆಯಿಂದ ಸೋಮವಾರದವರೆಗೆ ಜಿಲ್ಲಾ ಮಟ್ಟದಲ್ಲಿ ಲಾಕ್‍ಡೌನ್ ಮಾಡಲು ನಿರ್ಧರಿಸಲಾಗಿದೆ.

ತರಕಾರಿ, ಮೆಡಿಕಲ್ ಶಾಪ್‍ಗಳು, ಪೆಟ್ರೋಲ್ ಬಂಕ್‍ಗಳು ಸೇರಿದಂತೆ ಕಾರ್ಮಿಕರ ಅನುಕೂಲ ನೋಡಿಕೊಂಡು ಸರ್ಕಾರಿ ಆಹಾರ ಮಳಿಗೆಗಳಿಗೆ ಮಾತ್ರ ವಿನಾಯಿತಿ ಕೊಡಲಾಗಿದೆ. ಜಿಲ್ಲೆಯಲ್ಲಿ ಸರ್ಕಾರಿ ಸಾರಿಗೆ ಸ್ತಬ್ಧವಾಗಲಿದ್ದು, ಮೆಡಿಕಲ್, ಆಸ್ಪತ್ರೆ ಒಳಗೊಂಡಂತೆ ತುರ್ತು ಸೇವೆಗಳಿಗೆ ಮಾತ್ರ ಆಟೋ ಇತ್ಯಾದಿ ವಾಹನಗಳನ್ನು ಬಳಸಬಹುದು ಎಂದು ಅನೀಸ್ ಕೆ.ಜಾಯ್ ಅವರು ತಿಳಿಸಿದ್ದಾರೆ.

ಈಗಾಗಲೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಮೌಲ್ಯಮಾಪನ ನಡೆಯುತ್ತಿದ್ದು, ಇಲ್ಲಿಗೆ ಹಾಜರಾಗುವ ಶಿಕ್ಷಕರಿಗೆ ಸ್ವಂತ ವಾಹನ ಅಥವಾ ನಿಗದಿಪಡಿಸಿರುವ ಬಸ್‍ಗಳಲ್ಲಿ ಬರುವಂತೆ ಸೂಚಿಸಿದ್ದೇವೆ. ಕರ್ತವ್ಯಕ್ಕೆ ಹಾಜರಾಗುವಾಗ ತಮ್ಮ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು. ಇದೇ ನಿಯಮಗಳನ್ನು ಜುಲೈ 31ರವಗೆ ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.


Spread the love

About Laxminews 24x7

Check Also

ಮಾನಗೇಡಿ ಕೆಲಸ ಮಾಡು ಎಂದು ನಾವು ಹೇಳಿದ್ದೆವಾ?ತಿಮ್ಮಾಪುರ

Spread the love ಬಾಗಲಕೋಟೆ: ಮಾನಗೇಡಿ ಕೆಲಸ ಮಾಡು ಎಂದು ನಾವು ಹೇಳಿದ್ದೆವಾ? ಪ್ರಜ್ವಲ್ ಮತ್ತು ಸೂರಜ್ ಆ ಕೆಲಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ