Breaking News

72ನೇ ಗಣರಾಜ್ಯೋತ್ಸವ: ಗೂಗಲ್​ ಡೂಡಲ್​ದಲ್ಲಿ ಭಾರತದ ಪರಂಪರೆ ಪ್ರದರ್ಶನ

Spread the love

ನವದೆಹಲಿ: ರಾಷ್ಟ್ರದ 72ನೇ ಗಣರಾಜ್ಯೋತ್ಸವವನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಪ್ರಪಂಚದ ಜನಪ್ರಿಯ ಸರ್ಚ್ ಎಂಜಿನ್ ಗೂಗಲ್ ಸಹ ಗಣರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದ್ದು, ದೇಶದ ಕಲೆ ಮತ್ತು ವಾಸ್ತುಶಿಲ್ಪ, ಸಾಂಸ್ಕೃತಿಕ ಮತ್ತು ಏಕತೆಯ ಪರಂಪರೆಯನ್ನು ಡೂಡಲ್‌ನಲ್ಲಿ ಗೂಗಲ್ ಕಟ್ಟಿಕೊಟ್ಟಿದೆ.

ಡೂಡಲ್ ಕಲಾಕೃತಿಯಲ್ಲಿ ಕೆಂಪು ಕೋಟೆ ಸೇರಿದಂತೆ ದೇಶದ ಐತಿಹಾಸಿಕ ಕಟ್ಟಡಗಳು, ರಾಷ್ಟ್ರಧ್ವಜದಲ್ಲಿರುವ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ಮುಂಭಾಗದಲ್ಲಿ ದೇಶದ ವಿವಿಧ ಸಂಸ್ಕೃತಿಯ ಜನರನ್ನು ಪ್ರದರ್ಶಿಸುತ್ತಿದೆ. ಗೂಗಲ್ ಎಂಬ ಪದದ ಹೆಸರನ್ನು ನೀಲಿ ಬಣ್ಣದಲ್ಲಿ ಮಧ್ಯದಲ್ಲಿ ಅಲಂಕರಿಸಲಾಗಿದೆ.

ಸದ್ಯ ಗೂಗಲ್ ಹೇಳಿರುವ ಪ್ರಕಾರ; ಮುಂಬೈ ಮೂಲದ ಅತಿಥಿ ಕಲಾವಿದ ಓಂಕರ್ ಫೊಂಡೇಕರ್ ಇಂದಿನ ಡೂಡಲ್ ರಚಿಸಿದ್ದಾರೆ, 72 ವರ್ಷಗಳ ಹಿಂದೆ ಭಾರತೀಯ ಸಂವಿಧಾನವು ಜಾರಿಗೆ ಬಂದ ದಿನವನ್ನು ಸಂಸ್ಥೆ ಗೌರವಿಸುತ್ತದೆ ಎಂದು ಹೇಳಿತ್ತು.

ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯೋತ್ಸವನ್ನು ಆಚರಿಸಲಾಗುತ್ತಿದೆ. ಈ ಬಾರಿ 71ನೇ ಗಣರಾಜ್ಯೋತ್ಸವಕ್ಕೆ ಗೂಗಲ್ ಡೂಡಲ್‌ ಕೂಡ ಕೊಡುಗೆ ನೀಡಿದೆ.


Spread the love

About Laxminews 24x7

Check Also

ಹುಬ್ಬಳ್ಳಿ–ರಾಮನಾಥಪುರಂ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲಿನ ಸಂಚಾರ ಅವಧಿ ವಿಸ್ತರಣೆ

Spread the love ಹುಬ್ಬಳ್ಳಿ: ರೈಲ್ವೆ ಮಂಡಳಿಯು ರೈಲು ಸಂಖ್ಯೆ 07355/07356 ಎಸ್ಎಸ್ಎಸ್ ಹುಬ್ಬಳ್ಳಿ–ರಾಮನಾಥಪುರಂ–ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ