ಬೆಳಗಾವಿ - ಬೆಕ್ಕಿನಕೇರಿ ಗ್ರಾಮದ ಗವಳಿ ಗಲ್ಲಿಯಲ್ಲಿ ಸುಮಾರು ಏಳು ಲಕ್ಷ ರೂ.ಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯ ನಿರ್ಮಾಣದ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸೋಮವಾರ ಅಧಿಕೃತವಾಗಿ ಚಾಲನೆಯನ್ನು ನೀಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿ ಊರಿನಲ್ಲಿ ಒಂದಿಲ್ಲೊಂದು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಕಲವೆಡೆ ಪೂರ್ಣಗೊಂಡಿದ್ದರೆ ಇನ್ನು ಕಲವೆಡೆ ವಿವಿಧ ಹಂತಗಳಲ್ಲಿವೆ. ಜಾತಿ, ಪಕ್ಷ, ಭಾಷೆ ಯಾವುದೇ ಭೇದವಿಲ್ಲದೆ ನಿರಂತರವಾಗಿ ಅಭಿವೃದ್ಧಿಯೆಡೆಗೆ ಕ್ಷೇತ್ರವನ್ನು ಕೊಂಡೊಯ್ಯುತ್ತಿದ್ದೇನೆ. ಅಭಿವೃದ್ಧಿ ಜನರ ಹಕ್ಕು. ಅದರಿಂದ ಯಾರೂ ವಂಚಿತರಾಗಬಾರದು ಎನ್ನುವುದು ನನ್ನ ದೃಢ ನಿಲುವು. ಹಾಗಾಗಿ ಇಡೀ ಕ್ಷೇತ್ರ ನನ್ನ ಕುಟುಂಬ, ನನ್ನ ಮನೆ ಎನ್ನುವ ಕಲ್ಪನೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಹೇಳಿದರು. 
ಕಾಮಗಾರಿಯ ಚಾಲನೆಯ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ನೂತನವಾಗಿ ಆಯ್ಕೆಗೊಂಡ ಗ್ರಾಮ ಪಂಚಾಯತ್ ಸದಸ್ಯರು, ಲಕ್ಷ್ಮೀ ಗವಡೆ, ಚಬ್ಬುಬಾಯ್ ಕಾಂಬಳೆ, ಮಲಪ್ರಭಾ, ಮಾರುತಿ, ಗಜಾನನ ಮೋರೆ, ಕಲ್ಲಪ್ಪ, ಜೈವಂತ ಸಾವಂತ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
 Laxmi News 24×7
Laxmi News 24×7
				 
		 
						
					 
						
					 
						
					