ಚೆನ್ನೈ, : ತಮಿಳುನಾಡಿನಲ್ಲಿ ಚುನಾವಣಾ ಪೂರ್ವ ಪ್ರಚಾರದ ಎರಡನೆಯ ದಿನವಾದ ಭಾನುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚೀನಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು. ಚೀನಾ ಪಡೆಗಳು ಭಾರತದ ಜಾಗವನ್ನು ಅತಿಕ್ರಮಿಸಿಕೊಂಡಿವೆ. ಆದರೆ 56 ಇಂಚ್ ಎದೆಯ ವ್ಯಕ್ತಿಗೆ ನಮ್ಮ ನೆರೆಯ ದೇಶದ ಹೆಸರನ್ನು ಕೂಡ ಹೇಳಲು ಆಗುತ್ತಿಲ್ಲ ಎಂದು ಟೀಕಿಸಿದರು.
