Breaking News

k.l.e.ಲಾ ಕಾಲೇಜನಲ್ಲಿ ಶುಭಾಸ ಚಂದ್ರ ಬೋಸರ 125 ನೇ ಜಯಂತಿ ಆಚರಣೆ

Spread the love

ಚಿಕ್ಕೋಡಿ :ಸ್ವಾತಂತ್ರ್ಯ ಹೋರಾಟಗಾರ ಆಜಾದ ಹಿಂದ್ ಪೌಜ್ ಸಂಸ್ಥಾಪಕ ದೇಶ ಕಂಡ ಅಪ್ರತಿಮ ವೀರ ಶುಭಾಸ್ ಚಂದ್ರ ಬೋಸರ 125 ನೇ ಜಯಂತಿಯನ್ನು ಚಿಕ್ಕೋಡಿ ಕೆಎಲ್‌ಇ ಲಾ ಕಾಲೇಜ ಪ್ರಾಂಶುಪಾಲ ದುಡಂಪ್ಪಾ ಸೊಲ್ಲಾಪೂರೆ ಅವರು ಶುಭಾಸಚಂದ್ರ ಬೊಸ್ ಅವರ ಪೋಟೊಗೆ ಪೂಜೆ ಸಲ್ಲಿಸದರು.

ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು,
ಶುಭಾಸಚಂದ್ರ ಬೊಸರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು. ಭಾರತವು ಸ್ವಾತಂತ್ರ್ಯ ಪಡೆಯಲು ಭಾರತಕ್ಕೆ ಸಹಾಯ ಮಾಡಿದ ಜರ್ಮನಿ, ಜಪಾನ್, ರಷ್ಯಾಗಳಂತಹ ದೇಶಗಳು ಬ್ರಿಟಿಷ್ ವಿರುದ್ಧ ಹೋರಾಡಲು ಮತ್ತು ಸ್ವಾತಂತ್ರ್ಯ ಪಡೆಯಲು ಬೋಸರಿಗೆ ಸಹಾಯ ಮಾಡಲು ಸಿದ್ಧವಾಗಿದ್ದವು. ಗಾಂಧಿಯವರು ಸ್ವಾತಂತ್ರ್ಯ ಪಡೆಯುವ ಬಗೆಗೆ ಒಂದೇ ಮಾರ್ಗದಲ್ಲಿದ್ದರು. ಆದರೆ ಬೋಸ್ ಸ್ವಾತಂತ್ರಕ್ಕೆ ಸಸಸ್ತ್ರ ಹೋರಾಟವನ್ನೂ ಒಪ್ಪಿದ್ದರು. ಅವರ ಹೋರಾಟವು ವಿಫಲವಾದರೂ, ಭಾರತ ಸ್ವಾತಂತ್ರ ಪಡೆಯುವಲ್ಲಿ ಜನರನ್ನು ಉತ್ತೇಜಿಸಿ ತನ್ನದೇ ಆದ ಕೊಡಿಗೆ ನೀಡಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯು ಶುಭಾಸರ ಬೆಳದ ಬಂದ ದಾರಿಯನ್ನು ರೂಡಿಸಿಕೊಳ್ಳಿ‌ ಎಂದು ಮಾರ್ಗದರ್ಶನ ಮಾಡಿದರು.


Spread the love

About Laxminews 24x7

Check Also

ಬಾಲಕಿಗೆ ಲೈಂಗಿಕ ಕಿರುಕುಳ; ಇಬ್ಬರು ಆಟೋ ಚಾಲಕರ ಬಂಧನ

Spread the loveದಾವಣಗೆರೆ: ಆಟೋ‌ ಚಾಲಕರಿಬ್ಬರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಗರದ ಆರ್​ಎಂಸಿ ಯಾರ್ಡ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ