Breaking News

ದಾವೂದ್ ಸಹಚರ ಬಂಧನ

Spread the love

ಮುಂಬೈ, ಜ.21- ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಪರ್ವೇಜ್ ಖಾನ್ ಅಲಿಯಾಸ್ ಚಿಂಕೂ ಪಠಾಣ್ ಎಂಬುವನನ್ನು ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ನವಿ ಮುಂಬೈ ಬಳಿ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್‍ಸಿಬಿ) ತಂಡ ಬಂಧಿಸಿದೆ.

ಆರೋಪಿ ಖಾನ್‍ನಿಂದ ಮಾದಕವಸ್ತು ವಶಪಡಿಸಿಕೊಂಡಿದ್ದಾರೆ. ಮಾಫಿಯ ಡಾನ್ ಕರೀಂ ಲಾಲಾ ಸಂಬಂಧಿಯೂ ಆಗಿರುವ ಖಾನ್‍ನನ್ನು ಖಚಿತ ಮಾಹಿತಿ ಮೇಲೆ ಎನ್‍ಸಿಬಿ ವಿಭಾಗ ನಿರ್ದೇಶಕ ಸಮೀರ್ ವಾಂಖೆಡೆ ತಂಡ ಬಲೆ ಬೀಸಿ ಬಂಧಿಸಿದೆ.ಖಾನ್ ಮುಂಬೈನ ಗುಪ್ತ ಸ್ಥಳದಲ್ಲಿ ಬಚ್ಚಿಟ್ಟುಕೊಂಡು ಡ್ರಗ್ಸ್ ದಂಧೆ ನಡೆಸುತ್ತಿದ್ದನೆಂದು ಅಧಿಕಾರಿಗಳು ತಿಳಿಸಿದ್ದಾರೆ. ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೊಪಿಕ್ ಸಬ್ಸಟೆನ್ಸ್ (ಎನ್‍ಡಿಪಿಎಸ್) ಕಾನೂನಿನಡಿ ದೂರು ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಆತನಿಗೆ ದೇಶದ ವಿವಿಧೆಡೆಯ ಡ್ರಗ್ ಪೆಡ್ಲರ್‍ಗಳ ಜೊತೆ ಸಂಬಂಧವಿದೆ ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ವೈದ್ಯಕೀಯ ಔಷಧ, ಉಪಕರಣಗಳ ಸುಂಕ ಕಡಿತ ಸಾಧ್ಯತೆ

Spread the loveಆರೋಗ್ಯ ವಲಯಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ರೇಡಿಯೋ ಥೆರಪಿಯಂಥಹ ಸುಧಾರಿತ ಉಪಕರಣ ಮೇಲಿನ ಸೀಮಾ ಸುಂಕ ಕಡಿಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ