ಶಾರುಖ್ ಖಾನ್ ಅಭಿನಯದ ಬಿಗ್ ಬಜೆಟ್ ಸಿನಿಮಾ ನಿರ್ದೇಶಿಸುತ್ತಿರುವ ಹಿಟ್ ನಿರ್ದೇಶಕನಿಗೆ ಸೆಟ್‌ನಲ್ಲಿಯೇ ಸಹಾಯಕನೊಬ್ಬ ಕಪಾಳಕ್ಕೆ ಹೊಡೆದಿದ್ದಾನೆ.
ಶಾರುಖ್ ಖಾನ್ ಅಭಿನಯದ ‘ಪಠಾಣ್’ ಸಿನಿಮಾದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಗೆ ಸಹಾಯಕ ನಿರ್ದೇಶಕನೊಬ್ಬ ಕಪಾಳಕ್ಕೆ ಹೊಡೆದಿದ್ದಾನೆ ಎಂದು ಬಾಲಿವುಡ್ ಹಂಗಾಮ ಹಾಗೂ ಇನ್ನೂ ಕೆಲವು ಬಾಲಿವುಡ್ ಪತ್ರಿಕೆಗಳು ವರದಿ ಮಾಡಿವೆ.
ಸಿದ್ಧಾರ್ಥ್ ಆನಂದ್ ತುಸು ಸಿಟ್ಟಿನ ವ್ಯಕ್ತಿಯಾಗಿದ್ದು, ಸೆಟ್‌ನಲ್ಲಿ ತಮ್ಮ ಸಹಾಯಕನೊಬ್ಬ ಸೂಕ್ತವಾಗಿ ಕೆಲಸ ಮಾಡಿಲ್ಲವೆಂಬ ಕಾರಣಕ್ಕೆ ಸಹಾಯಕನ ಕಪಾಳಕ್ಕೆ ಹೊಡೆದಿದ್ದದಾರೆ. ಕೂಡಲೇ ಸಿಟ್ಟಿಗೆದ್ದ ಸಹಾಯಕ ತಿರುಗಿಸಿ ಸಿದ್ಧಾರ್ಥ್ ಆನಂದ್ ರ ಕಪಾಳಕ್ಕೆ ಹೊಡೆದಿದ್ದಾನೆ.
ಘಟನೆ ನಡೆದಾಗ ಶಾರುಖ್ ಖಾನ್ ಸಹ ಸೆಟ್ ನಲ್ಲಿ ಇದ್ದರು ಎನ್ನಲಾಗುತ್ತಿದೆ. ಸೆಟ್‌ನಲ್ಲಿ ಎಲ್ಲರ ಮುಂದೆಯೇ ಘಟನೆ ನಡೆದಿದೆ.
ಸ್ಥಳದಲ್ಲಿದ್ದವರು ಹೇಳಿರುವಂತೆ ಸಹಾಯಕನು ಸೂಕ್ತವಾಗಿ ಕೆಲಸ ಮಾಡದೇ ಇದ್ದ ಕಾರಣ ಸಿದ್ಧಾರ್ಥ್ ಆತನನ್ನು ಹೊಡೆದರು. ಕೂಡಲೇ ಆ ಸಹಾಯಕ ತಿರುಗಿಬಿದ್ದು ಸಿದ್ಧಾರ್ಥ್ ಕಪಾಳಕ್ಕೆ ಭಾರಿಸಿದ. ಅಷ್ಟೇ ಅಲ್ಲದೆ ಜೋರು ಜೋರಾಗಿ ಎಲ್ಲರ ಮುಂದೆ ಅವಾಚ್ಯ ಶಬ್ದಗಳಿಂದ ಸಿದ್ಧಾರ್ಥ್ ಆನಂದ್ ಅನ್ನು ಬೈದನಂತೆ.