Breaking News

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್’ ಆರಂಭ: ಸ್ಮಾರ್ಟ್ ಪೋನ್ ಗಳಿಗೆ 40% ಡಿಸ್ಕೌಂಟ್ !

Spread the love

ನವದೆಹಲಿ: ದೇಶದ ಬೃಹತ್ ಆನ್ ಲೈನ್ ಮಾರುಕಟ್ಟೆ ಮಳಿಗೆಯಾಗಿರುವ ಅಮೆಜಾನ್ ಗಣರಾಜ್ಯೋತ್ಸವದ ಸಂಭ್ರಮಾಚರಣೆಯ ತಯಾರಿಯಲ್ಲಿರುವ ತನ್ನ ಭಾರತೀಯ ಗ್ರಾಹಕರಿಗಾಗಿ ‘ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್’ ಅನ್ನು ಪ್ರಾರಂಭಿಸಿದೆ. ಆ ಮೂಲಕ ಸ್ಮಾರ್ಟ್ ಪೋನ್ ಗಳನ್ನು ಒಳಗೊಂಡಂತೆ ಹಲವು ಇಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಭಾರಿ ಆಫರ್ ನೀಡಲು ಮುಂದಾಗಿದೆ.

ಈಗಾಗಲೇ ಅಮೆಜಾನ್ ಪ್ರೈಮ್ ಬಳಕೆದಾರರಿಗೆ ಈ ಆಫರ್ ಗಳು ಲ‍ಭ್ಯವಿದ್ದು, ಇಂದಿನಿಂದ ಆರಂಭಗೊಂಡು ಜನವರಿ 23 ರ ವರೆಗೆ ಎಲ್ಲಾ ಗ್ರಾಹಕರಿಗೂ ಆಫರ್ ಸಿಗಲಿದೆ. ಸ್ಮಾರ್ಟ್ ಪೋನ್ ಗಳ ಮೇಲೆ ಶೇ.40 ರಷ್ಟು ಡಿಸ್ಕೌಂಟ್ ದೊರಕಲಿದ್ದು, ಇಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಶೇ. 60% ಭಾರಿ ಡಿಸ್ಕೌಂಟ್ ಲಭ್ಯವಿದೆ. ಜೊತೆಗೆ ಎಸ್.ಬಿ. ಐ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸಿ ವಸ್ತುಗಳನ್ನು ಖರೀದಿಸಿದರೆ ಶೇ. 10 ರಷ್ಟು ಹೆಚ್ಚುವರಿ ರಿಯಾಯಿತಿ ಸಿಗಲಿದೆ.

ಈ ಭಾರಿಯ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ಹಲವಾರು ಸ್ಮಾರ್ಟ್ ಪೋನ್ ಗಳು ಭಾರಿ ರಿಯಾಯಿತಿ ದರದಲ್ಲಿ ಮಾರಾಟಕಿದ್ದು, ಐ ಪೋನ್ 12 ಮಿನಿ 64,490 ರೂಗಳಿಗೆ ಗ್ರಾಹಕರಿಗೆ ಲಭ್ಯವಿದೆ. ಅಲ್ಲದೆ ಎಸ್.ಬಿ. ಐ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಮಾಡುವವರಿಗೆ 4,500 ರೂಗಳ ಹೆಚ್ಚುವರಿ ಡಿಸ್ಕೌಂಟ್ ಸಿಗಲಿದೆ. ಐ ಪೋನ್ 11 ಸ್ಮಾರ್ಟ್ ಪೋನ್ 53,999 ರೂ. ಇದ್ದು, ಇದಕ್ಕೆ ಮಾತ್ರ ಎಸ್.ಬಿ. ಐ ಕಾರ್ಡ್ ರಿಯಾಯಿತಿ ದೊರಕುವುದಿಲ್ಲ. ಇನ್ನು ಒನ್ ಪ್ಲಸ್, ಶಿಯೋಮಿ, ಸ್ಯಾಮ್ ಸಂಗ್ ಸ್ಮಾರ್ಟ್ ಪೋನ್ ಗಳು ಕೂಡ ರಿಯಾಯಿತಿ ದರದಲ್ಲಿ ಸಿಗಲಿದೆ.

ಈ ನಡುವೆ ಇಲೆಕ್ಟ್ರಾನಿಕ್ಸ್ ಕಂಪನಿಗಳಾದ ಹೆಚ್ ಪಿ, ಲೆನೊವೊ, ಜೆಬಿಎಲ್, ಬೋಟ್ ಕಂಪನಿಗಳ ಉತ್ಪನ್ನಗಳ ಖರೀದಿಯಲ್ಲಿಯೂ ಡಿಸ್ಕೌಂಟ್ ಗಳಿದ್ದು, ಶೇ. 60 ರಷ್ಟು ರಿಯಾಯಿತಿ ನೀಡಲಾಗಿದೆ.


Spread the love

About Laxminews 24x7

Check Also

ಬಳ್ಳಾರಿ: ಪ್ರೀತಿಸಿದ್ದಕ್ಕೆ ಯುವಕನ ಕೊಲೆ; ಯುವತಿಯ ತಂದೆ, ಅಣ್ಣನ ಬಂಧನ

Spread the loveಬಳ್ಳಾರಿ: ಮಗಳನ್ನು ಪ್ರೀತಿಸದಂತೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಪ್ರೀತಿಸುತ್ತಿದ್ದ ಯುವಕನನ್ನು ಹುಡುಗಿಯ ತಂದೆ ಹಾಗೂ ಅಣ್ಣ ಸೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ