Breaking News

ಬೆಳಗಾವಿಯಲ್ಲೂ ಲಾಕ್ ಡೌನ್ :ಭ್ರಷ್ಟಾಚಾರ ನಿರ್ಮೂಲನೆ ಪರಿವಾರ ಆಗ್ರಹ…..

Spread the love

ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚತಲಿದ್ದು, ಸೋಂಕು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಕನಿಷ್ಠ ಒಂದು ತಿಂಗಳು ಲಾಕ್ ಡೌನ್ ಜಾರಿ ಮಾಡುವಂತೆ   ಭ್ರಷ್ಟಾಚಾರ ನಿರ್ಮೂಲನೆ ಪರಿವಾರ ಆಗ್ರಹಿಸಿದೆ.

ಈ ವಿಚಾರವಾಗಿ ಗುರುವಾರ ಜಿಲ್ಲಾಧಿಕಾರಿ ಎಂ.ಜಿ. ಹೀರೇಮಠ ಅವರನ್ನು ಭೇಟಿ ಮಾಡಿ ಭ್ರಷ್ಟಾಚಾರ ನಿರ್ಮೂಲನೆ ಪರಿವಾರ ಮನವಿ ಸಲ್ಲಿಸಿದೆ.

ಬೆಳಗಾವಿ ನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತಲಿದೆ. ಹೀಗಾಗಿ ಬೆಳಗಾವಿಯಲ್ಲಿಯೂ ಲಾಕ್ ಡೌನ್ ಜಾರಿ ಮಾಡುವಂತೆ ಒತ್ತಾಯಿಸಿದ್ರು.

ಈ ಸಂದರ್ಭದಲ್ಲಿ  ವಕೀಲರಾದ   ನಿತಿನ್ ಬಾಳ ಬಂಡಿ,  ಶ್ವೇತಾ ಕುಲಕರ್ಣಿ,  ಸುಜಿತ್ ಮುಳಗುಂದ ಮನವಿ ನೀಡಿದ್ದಾರೆ .

ಈಗಾಗಲೇ ಜಿಲ್ಲೆಯಲ್ಲಿ ಅಥಣಿ, ಗೋಕಾಕ ಸೇರಿ ಐದು ತಾಲೂಕುಗಳಲ್ಲಿ ಒಂದು ವಾರದವರೆಗೆ ಲಾಕ್ ಡೌನ್ ಜಾರಿ ಮಾಡಲಾಗಿದೆ.


Spread the love

About Laxminews 24x7

Check Also

ಗೋಕಾಕ ಜಾತ್ರೆ:ದೇವಿಯರ ದರ್ಶನ ಪಡೆದ ಸಚಿವ ಸತೀಶ ಜಾರಕಿಹೊಳಿ ಹಾಗೂ ಪುತ್ರ ರಾಹುಲ್

Spread the loveಗೋಕಾಕ ಜಾತ್ರೆ:ದೇವಿಯರ ದರ್ಶನ ಪಡೆದ ಸಚಿವ ಸತೀಶ ಜಾರಕಿಹೊಳಿ ಹಾಗೂ ಪುತ್ರ ರಾಹುಲ್ ಜುಲೈ ಒಂದರಿಂದ ಆರಂಭಗೊಂಡಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ