Breaking News

ಕೊರೋನಾ ಲಸಿಕೆ ಪಡೆದಿದ್ದ ಮೂವರು ನರ್ಸ್ ಗಳು ಆಸ್ಪತ್ರೆಗೆ ದಾಖಲು

Spread the love

ಭೂಪಾಲ್: ಶನಿವಾರ ಕೋವಿಡ್-19 ಲಸಿಕೆ ಪಡೆದಿದ್ದ ಮಧ್ಯಪ್ರದೇಶದ ಉಜೈನಿ ಜಿಲ್ಲೆಯ ಮೂವರು ನರ್ಸ್ ಗಳಿಗೆ ಜ್ವರ, ತಲೆನೋವು ,ಸುಸ್ತು ವಾಕರಿಕೆ ಸಮಸ್ಯೆ ಕಾಣಿಸಿಕೊಂಡು ಭಾನುವಾರ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

25 ವರ್ಷದ ಮೂವರು ನರ್ಸ್ ಗಳು ಶನಿವಾರ ಕೋವಿಡ್ -19 ಲಸಿಕೆ ಪಡೆದುಕೊಂಡಿದ್ದರು ಎಂದು ಉಜೈನಿಯ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಮೂವರು ನರ್ಸ್ ಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ನಿಗಾವಣೆಯಲ್ಲಿ ಇಡಲಾಗಿತ್ತು.ಇದೀಗ ಎಲ್ಲರೂ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಉಜೈನಿ ಮುಖ್ಯ ಆರೋಗ್ಯಾಧಿಕಾರಿ ಡಾ. ಮಹಾವೀರ್ ಖಂಡೇಲ್ವಾಲ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.


Spread the love

About Laxminews 24x7

Check Also

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್

Spread the loveಬೆಂಗಳೂರು: ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ