ಬೆಂಗಳೂರು, ಜ. 16: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಎರಡು ದಿನಗಳ ಭೇಟಿ ನೀಡುತ್ತಿದ್ದಾರೆ. ಇಂದು (ಜ. 16) ಬೆಂಗಳೂರಿಗೆ ಆಗಮಿಸುವ ಅಮಿತ್ ಶಾ ಅವರು, ಬೆಂಗಳೂರು, ಭದ್ರಾವತಿ ಹಾಗೂ ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಕ್ಕೆ ಎರಡು ದಿನಗಳ ಭೇಟಿ ನೀಡುವ ಕೇಂದ್ರ ಗೃಹ ಸಚಿವರಿಗೆ ಅದ್ದೂರಿ ಸ್ವಾಗತ ಕೋರಲು ರಾಜ್ಯ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.
ಇಂದು ಜನವರಿ 16 ಹಾಗೂ ನಾಳೆ ಜನವರಿ 17 ರಂದು ಎರಡು ದಿನಗಳ ಕಾಲ ಕೇಂದ್ರ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ಪ್ರವಾಸ ಮಾಡಲಿದ್ದಾರೆ. ಇಂದು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿ, ಭದ್ರಾವತಿಗೆ ತೆರಳಲಿದ್ದಾರೆ. ಜನವರಿ 17 ರಂದು ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. 16 ರಂದು ಶನಿವಾರ ಬೆಳಗ್ಗೆ 9 ದೆಹಲಿಯಿಂದ ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಯಾಣ
* ವಿಶೇಷ ವಿಮಾನದ ಮೂಲಕ ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮನ
* ಬೆಳಗ್ಗೆ 11.45ಕ್ಕೆ ಬಿಎಸ್‌ಎಫ್ ಹೆಲಿಕ್ಯಾಪ್ಟರ್ ಮೂಲಕ ಭದ್ರಾವತಿಗೆ ಪ್ರಯಾಣ
* ಸಿಎಂ ಯಡಿಯೂರಪ್ಪ ಅವರೊಂದಿಗೆ 12.45ಕ್ಕೆ ಭದ್ರಾವತಿಗೆ ಆಗಮನ
* ಮಧ್ಯಾಹ್ನ 1ಕ್ಕೆ ಭದ್ರಾವತಿ ರ್ಯಾಪಿಡ್ ಆಕ್ಷನ್ ಪೋರ್ಸ್ ಕಾರ್ಯಕ್ರಮ ಉದ್ಘಾಟನೆ
* ಬಿಎಸ್‌ಎಫ್ ಹೆಲಿಕ್ಯಾಪ್ಟರ್ ಮೂಲಕ ಮಧ್ಯಾಹ್ನ 3.30 ಗಂಟೆಗೆ ಭದ್ರಾವತಿಯಿಂದ ಹೊರಟು ಸಂಜೆ 4.30ಕ್ಕೆ HAL ವಿಮಾನ ನಿಲ್ದಾಣಕ್ಕೆ ಆಗಮನ
* ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಸಂಜೆ 5ಕ್ಕೆ ವಿಧಾನಸೌಧಕ್ಕೆ ಆಗಮನ
* ಸಂಜೆ 5ಕ್ಕೆ ವಿಧಾನಸೌಧದ ಪೂರ್ವದ್ವಾರದ ಬಳಿ ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್ (ERSS) ವಾಹನಗಳಿಗೆ ಚಾಲನೆ ನೀಡುವುದು
* ಸಂಜೆ 05.10 ರಿಂದ 7 ಗಂಟೆ ವಿಧಾನಸೌಧದ ಬ್ಯಾಂಕ್ವಟ್ ಹಾಲ್‌ನಿಂದ ವರ್ಚುವಲ್ ಮೂಲಕ ಪೊಲೀಸ್ ಕ್ವಾರ್ಟರ್ಸ್‌ಗಳ ಉದ್ಘಾಟನೆ, ಪೊಲೀಸ್ ಗೃಹ-2025 ಕಾರ್ಯಕ್ರಮ ಉದ್ಘಾಟನೆ ಹಾಗೂ ವಿಜಯಪುರದ ಇಂಡಿಯನ್ ರಿಸರ್ವ್ ಬಟಾಲಿಯನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು.
* ಸಂಜೆ 7 ರಿಂದ 7.15ರ ವರೆಗೆ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಉಪಸ್ಥಿತಿ
* ಸಂಜೆ 7.30ಕ್ಕೆ ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಹೊಟೆಲ್‌ನಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಬೆಯಲ್ಲಿ ಭಾಗಿ
* ವಿಂಡ್ಸರ್ ಮ್ಯಾನರ್ ಹೋಟೆಲ್ ವಾಸ್ತವ್ಯ
ಜನವರಿ 16, 2021 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದ ವಿವರ:
* ಬೆಳಗ್ಗೆ 9ಕ್ಕೆ ವಿಂಡ್ಸರ್ ಮ್ಯಾನರ್ ಹೊಡೆಲ್‌ನಿಂದ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಪ್ರಯಾಣ
* ಬೆಳಗ್ಗೆ 10.30ಕ್ಕೆ ವಿಶೇಷ ವಿಮಾನದ ಮೂಲಕ ಹೆಚ್.ಎ.ಎಲ್‌ನಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಪ್ರಯಾಣ
* ಬೆಳಗ್ಗೆ 10.30ಕ್ಕೆ ಬೆಳಗಾವಿ ವಿಮಾನ ನಿಲ್ದಾಣದಿಂದ ಬಿಎಸ್‌ಎಫ್ ಹೆಲಿಕ್ಯಾಪ್ಟರ್ ಮೂಲಕ ಬಾಗಲಕೋಟೆ ಹೆಲಿಪ್ಯಾಡ್‌ಗೆ ಪ್ರಯಾಣ
* 11.30ಕ್ಕೆ ಬಾಗಲಕೋಟೆ ಹಯೆಲಿಪ್ಯಾಡ್‌ನಿಂದ ಸಚಿವ ಮುರುಗೇಶ್ ನಿರಾಣಿ ಅವರ ನಿರಾಣಿ ಎಥನಾಲ್ ತಯಾರಿಕಾ ಕಾರ್ಖಾನೆಗೆ ಚಾಲನೆ
* ಬೆಳಗ್ಗೆ 12.30ಕ್ಕೆ ಬಾಗಲಕೋಟೆ ಹೆಲಿಪ್ಯಾಡ್ ಬಿಎಸ್‌ಎಫ್ ಹೆಲಿಕ್ಯಾಪ್ಟರ್ ಮೂಲಕ ಬೆಳಗಾವಿಗೆ ಪ್ರಯಾಣ
* ಮಧ್ಯಾಹ್ನ 01.05ಕ್ಕೆ ಬೆಳಗಾವಿ ಸರ್ಕ್ಯೂಟ್ ಹೌಸ್‌ಗೆ ಆಗಮನ
* ಮಧ್ಯಾಹ್ನ 3ಕ್ಕೆ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಭೇಟಿ
* ಸಂಜೆ 4.10ಕ್ಕೆ ಬೆಳಗಾವಿ ಜೆಎನ್‌ಎಂಸಿ ಮೈದಾನದಲ್ಲಿ ಪಕ್ಷದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿ
* ಸಂಜೆ 5.40ಕ್ಕೆ ದಿ. ಮಾಜಿ ಸಚಿವ ಸುರೇಶ್ ಅಂಗಡಿ ಅವರ ನಿವಾಸಕ್ಕೆ ಭೇಟಿ
* ಸಂಜೆ 6.10ಕ್ಕೆ ಬೆಳಗಾವಿಯ ಸಂಕಮ್ ಹೋಟೆಲ್‌ನಲ್ಲಿ ಬಿಜೆಪಿಯ ಪ್ರಮುಖ ನಾಯಕರು, ಹಾಗೂ ಬೆಳಗಾವಿ ಜಿಲ್ಲಾ ನಾಯಕರ ಸಭೆ
* ಸಂಜೆ 7.40ಕ್ಕೆ ಬೆಳಗಾವಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣ