ಅವಕಾಶಕ್ಕಾಗಿ ಕಾಯುತ್ತಿರುವ ಎಷ್ಟೋ ಮಂದಿ ಲೈಂಗಿಕ ಕ್ರಿಯೆ ನಡೆಸಲು ಚಾನ್ಸ್ ಸಿಕ್ಕಾಗ ಮಾತ್ರ ಹಿಂಜರಿಯುತ್ತಾರೆ. ಹಾಗಾಗಿ ನೇರವಾಗಿ ಸಂಭೋಗಕ್ಕೆ ಜಾರುವ ಮುನ್ನ ಮೊದಲ ಬಾರಿಗೆ ಸೆಕ್ಸ್ ಮಾಡಬೇಕಾದವರು ಈ ಸಂಗತಿಗಳು ತಿಳಿದುಕೊಳ್ಳಲೇಬೇಕು.
ಲೈಂಗಿಕ ತೃಪ್ತಿ ಎನ್ನುವುದು ಗಂಡು ಮತ್ತು ಹೆಣ್ಣು ಇಬ್ಬರ ಮನಸ್ಸಿಗೆ ಸಂಬಂಧಿಸಿದ ವಿಚಾರ. ಇಬ್ಬರು ಮನಸ್ಸು ಮಾಡಿದರೇ ಮಾತ್ರ ದೇಹ ಸೇರಲು ಸಾಧ್ಯ. ಇದಕ್ಕೆ ಹೆಚ್ಚು ಸಮಯವೇನು ಬೇಕಿಲ್ಲ.
ಹೀಗೆ ಮೊದಲ ಬಾರಿಗೆ ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗಬೇಕು ಎನ್ನುವವರಿಗೆ ಮಾತ್ರ ಹಲವು ಪ್ರಶ್ನೆಗಳು ಎದುರಾಗುತ್ತವೆ. ಲೈಂಗಿಕ ಸಂಭೋಗದ ಮುಂಚೆ ಹಲವಾರು ಬಗೆಯ ಭಾವನೆಗಳು, ಆಲೋಚನೆಗಳು ಮಾನಸಿಕ ಒತ್ತಡ, ಆತಂಕ ಎಲ್ಲವೂ ಬಂದೋಗುತ್ತದೆ.
ಅವಕಾಶಕ್ಕಾಗಿ ಕಾಯುತ್ತಿರುವ ಎಷ್ಟೋ ಮಂದಿ ಲೈಂಗಿಕ ಕ್ರಿಯೆ ನಡೆಸಲು ಚಾನ್ಸ್ ಸಿಕ್ಕಾಗ ಮಾತ್ರ ಹಿಂಜರಿಯುತ್ತಾರೆ. ಹಾಗಾಗಿ ನೇರವಾಗಿ ಸಂಭೋಗಕ್ಕೆ ಜಾರುವ ಮುನ್ನ ಮೊದಲ ಬಾರಿಗೆ ಸೆಕ್ಸ್ ಮಾಡಬೇಕಾದವರು ಈ ಸಂಗತಿಗಳು ತಿಳಿದುಕೊಳ್ಳಲೇಬೇಕು.

ಬಹುತೇಕ ಜನರು ಮೊದಲನೇ ಬಾರಿಗೆ ನಡೆಸುವ ಲೈಂಗಿಕ ಕ್ರಿಯೆ ಅತ್ಯಂತ ನೋವುಕಾರಕ ಎಂದು ತಿಳಿದಿದ್ದಾರೆ. ಆದರೆ ಮೊದಲನೇ ಅನುಭವ ಅಷ್ಟು ಸುಲಭವಲ್ಲ ಎನ್ನಬಹುದೇ ಹೊರತು ಫಸ್ಟ್ ಟೈಮ್ ಸೆಕ್ಸ್ ನೋವು ಎಂಬುದು ಸುಳ್ಳು.

ಮೊದಲನೆಯ ಬಾರಿ ಲೈಂಗಿಕ ಸಂಪರ್ಕ ನಡೆಸುವಾಗ ಸುರಕ್ಷತೆ ತುಂಬಾ ಮುಖ್ಯ. ಇದಕ್ಕಾಗಿ ಕಾಂಡೋಮ್ ಬಳಕೆ ಅತ್ಯವಶ್ಯ. ಕಾಂಡೋಮ್ ಉಪಯೋಗದಿಂದ ಕೇವಲ ಮಾರಕ HIV ಯನ್ನು ತಡೆಗಟ್ಟುವುದು ಮಾತ್ರವಲ್ಲದೇ ಲೈಂಗಿಕವಾಗಿ ಹರಡುವ ಅನೇಕ ಬಗೆಯ ರೋಗಕಾರಕಗಳನ್ನು ಸಹ ತಡೆಯಬಹುದು.
ಇದು ಹಲವರಿಗೆ ಇರುವ ಸಾಮಾನ್ಯ ಪ್ರಶ್ನೆ. ಅದು ಮಹಿಳೆಯರ ಕನ್ಯತ್ವದ ವಿಚಾರದ ಸುತ್ತ ಸುತ್ತುವ ದೊಡ್ಡ ತಪ್ಪು ಕಲ್ಪನೆಯೆಂದರೆ ಮೊದಲ ಸಲ ಲೈಂಗಿಕ ಕ್ರಿಯೆ ಮಾಡುವಾಗ ರಕ್ತಸ್ರಾವ ಆಗಬೇಕೆಂಬುದು. ಲೈಂಗಿಕ ತಜ್ಞರು ಹೇಳುವ ಪ್ರಕಾರ ಎಲ್ಲಾ ಮಹಿಳೆಯರಿಗೆ ತಮ್ಮ ಮೊದಲ ಸಂಭೋಗದಲ್ಲಿ ರಕ್ತಸ್ರಾವವಾಗುವುದಿಲ್ಲ.

ಮೊದಲ ಬಾರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವವರು ಬಹಳ ಆಲೋಚಿಸುವುದು ನನಗೆ ಯಾವುದೇ ಅನುಭವವಿಲ್ಲ ಎಂದು. ಆದರೆ ಈ ಬಗ್ಗೆ ಭಯ ಬೇಕಿಲ್ಲ. ಲೈಂಗಿಕ ಸಂಭೋಗದ ಬಗ್ಗೆ ಯಾವುದೇ ನಾಚಿಕೆ ಸ್ವಭಾವ ಬೇಡ. ನೀವು ಎಷ್ಟು ಸರಾಗವಾಗಿ ಈ ವಿಚಾರದಲ್ಲಿ ಮುಂದುವರೆಯಲು ಪ್ರಯತ್ನಿಸುತ್ತೀರೋ ಅಷ್ಟು ಲೈಂಗಿಕ ತೃಪ್ತಿ ನಿಮ್ಮದಾಗುತ್ತದೆ.

ಅವಕಾಶ ಸಿಕ್ಕಿದ ಕೂಡಲೇ ನೇರವಾಗಿ ಸಂಭೋಗಕ್ಕೆ ಮುನ್ನುಗ್ಗುವ ಪ್ರಯತ್ನ ಬೇಡ. ಹಲವಾರು ಸಿನಿಮಾಗಳಲ್ಲಿ ತೋರಿಸುವಂತೆ ಮೊದಲು ರೋಮ್ಯಾನ್ಸ್ ಮಾಡಿ. ನಂತರ ಪ್ರೀತಿಯ ಚುಂಬನದಿಂದ ಶುರುವಾಗಿ ನಂತರ ಸಂಭೋಗದ ಗಡಿ ತಲುಪಬೇಕು.ಮೊಟ್ಟಮೊದಲ ಬಾರಿಗೆ ಸಂಭೋಗ ಕ್ರಿಯೆಯಲ್ಲಿ ತೊಡಗುವವರಿಗೆ ಮಾನಸಿಕ ಸಿದ್ದತೆ ತುಂಬಾ ಮುಖ್ಯ. ನಿಮ್ಮಿಬ್ಬರ ಮನಸ್ಸಿನ ಭಾವನೆಗಳನ್ನು ದೈಹಿಕವಾಗಿ ಒಂದಾಗಿಸಲು ಪ್ರಯತ್ನಿಸಬೇಕು. ಮನಸ್ಸನ್ನು ಮೊದಲು ಒಟ್ಟುಗೂಡಿಸಬೇಕು. ಆನಂತರ ನೀವು ಅಂದುಕೊಂಡ ಹಾಗೆ ನಿಮ್ಮ ಲೈಂಗಿಕ ತೃಪ್ತಿ ನಿಮ್ಮದಾಗುತ್ತದೆ.
Laxmi News 24×7