Breaking News

ತಮ್ಮ ಬಾಡಿಗಾರ್ಡ್‌ಗೆ ಸರ್ಪ್ರೈಸ್ ಉಡುಗೊರೆ ಕೊಟ್ಟ ಸುದೀಪ್

Spread the love

ನಟ ಕಿಚ್ಚ ಸುದೀಪ್ ತಮ್ಮ ಸುತ್ತಲಿರುವವರನ್ನು ಬಹಳ ಕೇರ್ ಮಾಡುತ್ತಾರೆ. ಕುಟುಂಬಕ್ಕೆ ಅತಿ ಹೆಚ್ಚು ಮೌಲ್ಯ ನೀಡುವ ಸುದೀಪ್, ತಮ್ಮ ಆಪ್ತ ಸಿಬ್ಬಂದಿಗಳನ್ನೂ ಸಹ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ.

ಹಲವು ವರ್ಷಗಳಿಂದ ತಮ್ಮ ಜೊತೆಗೇ ಇರುವ ಅಂಗರಕ್ಷಕ (ಬಾಡಿಗಾರ್ಡ್) ಸಾಯಿ ಕಿರಣ್ ಗೆ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ ಕಿಚ್ಚ ಸುದೀಪ್.

ಸಾಯಿಕಿರಣ್ ಅಲಿಯಾಸ್ ಕಿಚ್ಚ ಕಿರಣ್‌ ಗೆ ಬುಲೆಟ್ ಬೈಕ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ ನಟ ಕಿಚ್ಚ ಸುದೀಪ್. ಸಾಯಿಕಿರಣ್‌ ಗೆ ಇಷ್ಟವಾದ ಕಪ್ಪು ಬಣ್ಣದ ರಾಯಲ್ ಎನ್‌ಫೀಲ್ಡ್‌ ಬುಲೆಟ್ ಅನ್ನು ನೀಡಿದ್ದಾರೆ ಕಿಚ್ಚ.

ಈ ಬಗ್ಗೆ ಮಾಧ್ಯಮದೊಟ್ಟಿಗೆ ಮಾತನಾಡಿರುವ ಸಾಯಿ ಕಿರಣ್, ಇದು ನಿಜವಾಗಲೂ ನನಗೆ ಆಶ್ಚರ್ಯ, ಖುಷಿ ಏಕಕಾಲಕ್ಕೆ ತಂದಿದೆ. ನಾನು ಈ ಬೈಕ್‌ನಲ್ಲಿ ಮೊದಲಿಗೆ ಸುದೀಪ್ ಅವರನ್ನೇ ಕರೆದುಕೊಂಡು ಸುತ್ತಾಡುತ್ತೇನೆ ಎಂದಿದ್ದಾರೆ ಸಾಯಿ ಕಿರಣ್.

ಸುದೀಪ್ ಅವರ ಸ್ಪರ್ಷ ಸಿನಿಮಾದ ಕಾಲದಿಂದಲೂ ನಾನು ಅವರ ಅಭಿಮಾನಿ, ಆರು ವರ್ಷಗಳಿಂದಲೂ ಸುದೀಪ್ ಅವರೊಟ್ಟಿಗೆ ಕೆಲಸ ಮಾಡುತ್ತಿದ್ದೀನಿ. ಸುದೀಪ್ ಅವರಿಗೆ ಹಾಗೂ ಅವರ ಕುಟುಂಬಕ್ಕೆ ನಾನು ಚಿರರುಣಿ’ ಎಂದಿದ್ದಾರೆ ಸಾಯಿ ಕಿರಣ್.


Spread the love

About Laxminews 24x7

Check Also

ಇಟ್ಟಿಗೆ ತುಂಬಿದ ಟ್ರ‍್ಯಾಕ್ಟರ್ -‌ ಟ್ರೇಲರ್ ಮಧ್ಯೆ ಸಿಲುಕಿ ಚಾಲಕ ದುರ್ಮರಣ

Spread the loveಹಾವೇರಿ: ಇಟ್ಟಿಗೆ ತುಂಬಿದ ಟ್ರ‍್ಯಾಕ್ಟರ್  ಮತ್ತು ಟ್ರೇಲರ್ ನಡುವೆ ಸಿಲುಕಿ ಚಾಲಕ  ಸಾವನ್ನಪ್ಪಿರುವ ಘಟನೆ ಹಾವೇರಿ  ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ