Breaking News

ಯಡಿಯೂರಪ್ಪ ಕ್ಯಾಬಿನೆಟ್​ ಸೇರಿದ ಸಪ್ತ ಸಚಿವರು

Spread the love

ಬೆಂಗಳೂರು (ಜ. 13): ಬಿಎಸ್​ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಕಾರ್ಯಕ್ಕೆ ಕಡೆಗೂ ಅಂತ್ಯ ಸಿಕ್ಕಿದ್ದು, ರಾಜಭವನದಲ್ಲಿ ನಡೆಯುತ್ತಿರುವ ಸಂಪುಟ ವಿಸ್ತರಣೆ ಕಾರ್ಯದಲ್ಲಿ ಏಳು ಜನ ನೂತನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ 3:50ಕ್ಕೆ ನೂತನ ಸಚಿವರ ಪದಗ್ರಹಣ ಕಾರ್ಯ ಆರಂಭವಾಗಿದ್ದು, ರಾಷ್ಟ್ರಗೀತೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನೂತನ ಸಚಿವರಿಗೆ ರಾಜ್ಯಪಾಲರು ಪ್ರಮಾಣವಚನ ಬೋಧಿಸಿದರು. ಮೊದಲಿಗೆ ಸಂಪುಟ ದರ್ಜೆ ಸಚಿವರಾಗಿ ಉಮೇಶ್ ಕತ್ತಿ ಪ್ರಮಾಣವಚನ ಸ್ವೀಕರಿಸಿದ್ದರು. ಬಳಿಕ ಬೆಳಗಾವಿಯ ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ದೇವರು, ರೈತರ ಹೆಸರಿನಲ್ಲಿ  ಪ್ರಮಾಣ ವಚನ ಸ್ವೀಕರಿಸಿದರು.  ಮುರುಗೇಶ್ ರುದ್ರಪ್ಪ ನಿರಾಣಿ ಕೂಡ ದೇವರು, ರೈತರು ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಅರವಿಂದ್​ ಲಿಂಬಾವಳಿ, ಎಂಟಿಬಿ ನಾಗರಾಜ್​ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು

ಯಡಿಯೂರಪ್ಪ ಕ್ಯಾಬಿನೆಟ್​ ಸೇರಿದ ಸಪ್ತ ಸಚಿವರು; ನೂತನ ಸಚಿವರಿಂದ ಪ್ರಮಾಣವಚನ ಸ್ವೀಕಾರ

ಕೆಪಿಜೆಪಿಯಿಂದ ಆಯ್ಕೆಯಾದ ಆರ್​ ಶಂಕರ್​, ಸಚಿವಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದು ಕಡೆ ಕ್ಷಣದ ವರೆಗೂ ಲಾಬಿ ನಡೆಸಿದ್ದರು. ಅವರು ಕೂಡ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ ಸಿಪಿ ಯೋಗೇಶ್ವರ್​ 2008ರಲ್ಲಿ ಡಿಕೆ ಶಿವಕುಮಾರ್​ ವಿರುದ್ಧ ಬಂಡಾಯವೆದ್ದು ಬಿಜೆಪಿ ಸೇರಿದ್ದರು. ಪರಿಷತ್​ ಸದಸ್ಯರಾಗಿರುವ ಅವರು ಸಚಿವಾಕಾಂಕ್ಷಿಯಾಗಿದ್ದು, ಕಡೆಗೂ ಸಂಪುಟ ಸೇರುವಲ್ಲಿ ಯಶಸ್ವಿಯಾದರು.

ದಕ್ಷಿಣ ಕನ್ನಡದ ಬಿಜೆಪಿ ನಾಯಕರಾಗಿರುವ ಎಸ್​ ಅಂಗಾರ ಕೂಡ ಇದೇ ಮೊದಲ ಬಾರಿಗೆ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಆರ್​ಎಸ್​ಎಸ್​ ನಂಟು ಹೊಂದಿರುವ ಅಂಗಾರ ಹೈ ಕಮಾಂಡ್​ನಿಂದ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಪಕ್ಷ ಅಧ್ಯಕ್ಷರಾಗಿದ್ದ ನಳಿನ್​ ಕುಮಾರ್​ ಕಟೀಲ್​, ಸಿಎಂ ಪುತ್ರ ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗಿಯಾಗಿದ್ದರು


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ