Breaking News

ಸಂಕ್ರಾಂತಿ ಹಬ್ಬಕ್ಕೆ ಕಬ್ಜ ಚಿತ್ರತಂಡ ಕೊಡಲಿದೆ ಬಿಗ್ ಸರ್ಪ್ರೈಸ್, ಏನಿರಬಹುದು?

Spread the love

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್ ಚಂದ್ರು ಕಾಂಬಿನೇಷನ್‌ನಲ್ಲಿ ತಯಾರಾಗುಲಿರುವ ಕಬ್ಜ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಕೆಜಿಎಫ್ ನಂತರ ಅಷ್ಟು ದೊಡ್ಡ ಮಟ್ಟಕ್ಕೆ ಅಥವಾ ಅದನ್ನು ಮೀರಿಸುವಂತಹ ಸಿನಿಮಾ ಇದಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಭಾರತದ ಏಳು ಪ್ರಮುಖ ಭಾಷೆಗಳಲ್ಲಿ ಕಬ್ಜ ಸಿನಿಮಾ ಬಿಡುಗಡೆಯಾಗಲಿದೆ. ಸ್ಯಾಂಡಲ್‌ವುಡ್ ಇಂಡಸ್ಟ್ರಿ ಪಾಲಿಗೆ ಇದು ಅತಿ ದೊಡ್ಡ ಬಜೆಟ್ ಚಿತ್ರ. ಇದೀಗ, ಸಂಕ್ರಾಂತಿ ಹಬ್ಬಕ್ಕೆ ಕಬ್ಜ ಚಿತ್ರತಂಡ ದೊಡ್ಡ ಸರ್ಪ್ರೈಸ್ ನೀಡಲಿದೆಯಂತೆ.

ಆ ಸರ್ಪ್ರೈಸ್ ಏನು ಎನ್ನುವುದು ಸದ್ಯಕ್ಕೆ ಗೌಪ್ಯವಾಗಿದೆ. ಜನವರಿ 14 ರಂದು ಬೆಳಗ್ಗೆ 10 ಗಂಟೆಗೆ ಆ ಸರ್ಪ್ರೈಸ್ ಏನು ಅಂತ ಬಹಿರಂಗವಾಗಲಿದೆ. ಅಲ್ಲಿಯವರೆಗೂ ಆ ಕುತೂಹಲ ಹಾಗೆ ಉಳಿಸಿಕೊಳ್ಳಬೇಕಿದೆ.

ಕೆಜಿಎಫ್ ಚಿತ್ರದಂತೆ ‘ಕಬ್ಜ’ ಚಿತ್ರವೂ ಡಬಲ್ ಧಮಾಕ

ಸದ್ಯ ಕಬ್ಜ ಚಿತ್ರದ ಪೋಸ್ಟರ್, ಫೋಟೋಶೂಟ್ ಹಾಗೂ ಮೋಷನ್ ಪೋಸ್ಟರ್‌ಗಳು ಬಿಡುಗಡೆಯಾಗಿದ್ದು, ಮೇಕಿಂಗ್ ವಿಚಾರಕ್ಕೂ ದೊಡ್ಡ ಸುದ್ದಿಯಲ್ಲಿದೆ. ಆರ್ ಚಂದ್ರು ವೃತ್ತಿ ಜೀವನದಲ್ಲಿ ಇದು ಮೈಲಿಗಲ್ಲು ಆಗಲಿದೆ ಎಂಬ ಮಾತಿದೆ.

ಎಂಟಿಬಿ.ನಾಗರಾಜ್ ಅರ್ಪಿಸುವ, ಉಪೇಂದ್ರ ನಟನೆಯ ಸಿನಿಮಾದ ಪೋಸ್ಟರ್ ಬಿಡುಗಡೆ

ಅಂದ್ಹಾಗೆ, ಈ ಸಿನಿಮಾವು 1947 ರಲ್ಲಿ ನಡೆಯುವ ಕತೆ ಆಧರಿಸಿದೆ ಎನ್ನಲಾಗಿದೆ. 1947 ಹಾಗೂ 1980 ರ ದಶಕದ ಘಟನೆಗಳಿಂದ ಪ್ರೇರೇಪಿತಗೊಂಡಿದೆ. ರೌಡಿಸಂ ಕುರಿತಾದ ಚಿತ್ರ ಇದಾಗಿದ್ದು, ಈ ಹಿಂದಿನ ರೌಡಿಸಂ ಚಿತ್ರಗಳನ್ನು ಮೀರಿಸಲಿದೆ ಎಂಬ ನಿರೀಕ್ಷೆ ಇದೆ.

ಕೆಜಿಎಫ್ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಕಬ್ಜ ಚಿತ್ರಕ್ಕೂ ಸಂಗೀತ ನೀಡಲಿದ್ದಾರೆ. ಅರ್ಜುನ್ ಶೆಟ್ಟಿ ಛಾಯಾಗ್ರಹಣವಿದೆ. ಎಂಟಿಬಿ ನಾಗರಾಜ್ ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ. ಇನ್ನುಳಿದಂತೆ ನಾಯಕಿಯ ಆಯ್ಕೆ ಆಗಿಲ್ಲ. ಬಹುಶಃ ಸಂಕ್ರಾಂತಿ ಹಬ್ಬಕ್ಕೆ ನಾಯಕಿ ಯಾರೆಂದು ಬಹಿರಂಗಗೊಳಿಸಬಹುದು ಎಂದು ಹೇಳಲಾಗಿದೆ.


Spread the love

About Laxminews 24x7

Check Also

ಭೂಮಿ‌ ಇರೋವರೆಗೂ ಬಸವಣ್ಣನವರ ವಿಚಾರಧಾರೆಗಳನ್ನ ಕಾಪಾಡಬೇಕು: ಬಸವ ಸಂಸ್ಕೃತಿ ಅಭಿಯಾನದಲ್ಲಿ ಸತೀಶ ಜಾರಕಿಹೊಳಿ

Spread the loveಬೆಳಗಾವಿ: “ಭೂಮಿ ಇರುವವರೆಗೆ ಬಸವಣ್ಣನವರ ವಿಚಾರಗಳನ್ನು ಕಾಪಾಡುವ ಪ್ರಯತ್ನ ಮಾಡಬೇಕಿದೆ. ದೇಶದಲ್ಲಿ ಮೂಲ ವಿಚಾರ ಮತ್ತು ಇತಿಹಾಸವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ