Breaking News

ಮಾಸ್ಕ್ ಹಾಕದೆ ಗಲ್ಲಿ ಕ್ರಿಕೆಟ್ ಆಡಿ ಟ್ರೋಲ್ ಆದ ಆಮೀರ್ ಖಾನ್

Spread the love

ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಸದ್ಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಚಿತ್ರೀಕರಣ ಮುಕ್ತಾಯ ಗೊಳಿಸಿದ್ದಾರೆ. ಆಮೀರ್ ಖಾನ್ ಅವರನ್ನು ತೆರೆಮೇಲೆ ನೋಡದೆ ಎರಡು ವರ್ಷದ ಮೇಲಾಗಿದೆ. ಥಗ್ಸ್ ಆಫ್ ಹಿಂದೂಸ್ತಾನ್ ಸೋತ ಬಳಿಕ ಆಮೀರ್ ಖಾನ್ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿಲ್ಲ.

ಇದೀಗ ಲಾಲ್ ಸಿಂಗ್ ಚಡ್ಡಾ ಮೂಲಕ ಮತ್ತೆ ಅಭಿಮಾನಿಗಳನ್ನು ಮೋಡಿ ಮಾಡಲು ಆಮೀರ್ ಖಾನ್ ಸಿದ್ಧರಾಗಿದ್ದಾರೆ. ಲಾಕ್ ಡೌನ್ ಬಳಿಕ ಚಿತ್ರೀಕರಣ ಪ್ರಾರಂಭಮಾಡಿ ಮುಗಿಸಿರುವ ಮಿಸ್ಟರ್ ಪರ್ಫೆಕ್ಷನಿಸ್ಟ್ ಸದ್ಯ ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ.

ಈ ನಡುವೆ ಆಮೀರ್ ಖಾನ್ ಮುಂಬೈನಲ್ಲಿ ಮಕ್ಕಳ ಜೊತೆ ಗಲ್ಲಿ ಕ್ರಿಕೆಟ್ ಆಗಿ ಗಮನ ಸೆಳೆದಿದ್ದಾರೆ. ಹೌದು, ಅಮೀರ್ ಖಾನ್ ಮಕ್ಕಳ ಜೊತೆ ಸೇರಿ ಕ್ರಿಕೆಟ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಮೀರ್ ಖಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಮೀರ್ ಖಾನ್ ಸೇರಿದಂತೆ ಕ್ರಿಕೆಟ್ ಆಡುತ್ತಿರುವ ಮಕ್ಕಳು ಸಹ ಮಾಸ್ಕ್ ಧರಿಸಿಲ್ಲ ಎಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಒಬ್ಬ ಸ್ಟಾರ್ ನಟನಾಗಿ, ಸಾಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಆಮೀರ್ ಖಾನ್ ಉಳಿದವರಿಗೆ ಮಾದರಿಯಾಗಬೇಕು. ಆದರೆ ಬುದ್ದಿಹೇಳಬೇಕಾದವರೇ ಮೈ ಮರೆತು ಇಂಥ ಕೆಲಸ ಮಾಡಿದರೆ ಉಳಿದವರಿಗೆ ಏನು ಸಂದೇಶ ರವಾನಿಸುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ.

ಮಕ್ಕಳ ಜೊತೆ ಕೆಲವು ಸಮಯ ಕ್ರಿಕೆಟ್ ಆಡಿ, ಬಳಿಕ ಅವರ ಜೊತೆ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಈ ವಿಡಿಯೋ ಎಲ್ಲಾ ಕಡೆ ಹರಿದಾಡುತ್ತಿದೆ. ಮಾಸ್ಕ್ ಧರಿಸಿಲ್ಲ ಎಂದು ಟ್ರೋಲ್ ಮಾಡಿದರೆ ಇನ್ನು ಕೆಲವರು ಆಮೀರ್ ಖಾನ್ ಪರ ಬ್ಯಾಟ್ ಬೀಸಿದ್ದಾರೆ. ಕ್ರಿಕೆಟ್ ಆಡುವಾಗ ಉಸಿರಾಡಬೇಕು. ಆ ಸಮಯದಲ್ಲಿ ಮಾಸ್ಕ್ ಧರಿಸಿದರೆ ಉಸಿರಾಡಲು ಸಾಧ್ಯವಾಗಿಲ್ಲ, ಹಾಗಾಗಿ ಧರಿಸಿಲ್ಲ ಎಂದಿದ್ದಾರೆ.


Spread the love

About Laxminews 24x7

Check Also

ಧಾರವಾಡ ಮಾರ್ಗದ ಮುಂದವಾಡ ಕ್ರಾಸ್ ಬಳಿ ವ್ಯಾಗನಾರ್ ಕಾರು ಮರಕ್ಕೆ ಡಿಕ್ಕಿ ಚಾಲಕ ಸ್ಥಳದಲ್ಲೇ ಸಾವು,

Spread the love ರಾಮನಗರ -ಧಾರವಾಡ ಮಾರ್ಗದ ಮುಂದವಾಡ ಕ್ರಾಸ್ ಬಳಿ ವ್ಯಾಗನಾರ್ ಕಾರು ಮರಕ್ಕೆ ಡಿಕ್ಕಿ ಚಾಲಕ ಸ್ಥಳದಲ್ಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ