Breaking News

ಕಿಚ್ಚ ಸುದೀಪ್ಪತ್ನಿ ಪ್ರಿಯಾ ಅವರ ಹುಟ್ಟುಹಬ್ಬಅವರ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್

Spread the love

ಬೆಂಗಳೂರು: ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಅವರ ಹುಟ್ಟುಹಬ್ಬವಾಗಿದ್ದು, ಕಿಚ್ಚ ಸುದೀಪ್ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ಲ್ಲಿ ಹೇಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಭಾವನಾತ್ಮಕವಾಗಿ ಶುಭ ಕೋರಿದ್ದಾರೆ. ಕವಿ ನಾನಲ್ಲ, ಕವಿತೆಯಂತೂ ನನಗೆ ಗೊತ್ತಿಲ್ಲ. ಕೆಲ ಸಿಂಪಲ್ ವರ್ಡ್ಸ್ ನಳ್ತೀನಿ ಅದರ್ ಮೇಲ್ ನಂಗ್ ಗೊತ್ತಿಲ್ಲ ಎಂದು ಒಂದೇ ಸಾಲಿನ ಕವಿತೆ ಹೇಳಿ. ಬಳಿಕ ಮಡದಿಯೋ, ಗೆಳತಿಯೋ ಏನೆಂದು ಕರೆಯಲಿ ನಿನ್ನ ಎಂದು ಭಾವನಾತ್ಮಕವಾಗಿ ಹೇಳುವ ಮೂಲಕ ಅವರ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ್ದಾರೆ.
ವಿಡಿಯೋ ಜೊತೆಗೆ ಸಾಲುಗಳನ್ನೂ ಬರೆದಿರುವ ಕಿಚ್ಚ ಸುದೀಪ್, ಐ ಬಿಕೇಮ್ ಎ ಬರ್ಡ್ ಆ್ಯಂಡ್ ಯು ಕುಡ್ ನಾಟ್ ಫ್ಲೈ, ಜಸ್ಟ್ ಸೋ ಬಿ ವಿತ್ ಮೀ, ಯು ಬಿಕಮ್ ದಿ ಸ್ಕೈ….ಹ್ಯಾಪಿ ರಿಟರ್ನ್ಸ್ ಪ್ರೀ…..ವಿಶಿಂಗ್ ಯು ದಿ ಬೆಸ್ಟ್ ಆಲ್ವೇಸ್. ಮಚ್ ಲವ್ ಆ್ಯಂಡ್ ಹಗ್ಸ್ ಎಂದು ಬರೆದಿದ್ದಾರೆ.
ಇಂದು ಬೆಳಗ್ಗೆಯಿಂದಲೇ ಕಿಚ್ಚನ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಿಯಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದು, ಮಲಯಾಳಂ ನಟಿ ಮಂಜು ವಾರಿಯರ್ ಸಿಡಿಪಿ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಅಭಿಮಾನಿಗಳು ಇದೇ ಸಿಡಿಪಿ ಹಾಕಿ ಶುಭಾಶಯ ತಿಳಿಸುತ್ತಿದ್ದಾರೆ. ಈ ಟ್ವೀಟ್‍ಗೆ ಕಿಚ್ಚ ಸುದೀಪ್ ಸಹ ಪ್ರತಿಕ್ರಿಯಿಸಿದ್ದಾರೆ.


Spread the love

About Laxminews 24x7

Check Also

ವೈದ್ಯಕೀಯ ಔಷಧ, ಉಪಕರಣಗಳ ಸುಂಕ ಕಡಿತ ಸಾಧ್ಯತೆ

Spread the loveಆರೋಗ್ಯ ವಲಯಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ರೇಡಿಯೋ ಥೆರಪಿಯಂಥಹ ಸುಧಾರಿತ ಉಪಕರಣ ಮೇಲಿನ ಸೀಮಾ ಸುಂಕ ಕಡಿಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ