ಬಡವರ ಬದುಕಿನ ಆಧಾರ ‘ಮನರೇಗಾ’ ಉಳಿವಿಗೆ ನಮ್ಮ ಹೋರಾಟ!
AICC ಹಾಗೂ KPCC ಮಾರ್ಗದರ್ಶನದಂತೆ, ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆಗಳ ವಿರುದ್ಧ ಇಂದು ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಳ್ಳಲಾದ “ಮನರೇಗಾ ಬಚಾವೋ ಆಂದೋಲನ”ದ ಒಂದು ದಿನದ “ಉಪವಾಸ ಸತ್ಯಾಗ್ರಹ”ದಲ್ಲಿ ಪಾಲ್ಗೊಂಡು ಧ್ವನಿ ಎತ್ತಲಾಯಿತು.
ಗ್ರಾಮೀಣ ಭಾಗದ ಬಡ ಕಾರ್ಮಿಕರ ಪಾಲಿನ ಸಂಜೀವಿನಿಯಾಗಿರುವ ಉದ್ಯೋಗ ಖಾತರಿ ಯೋಜನೆಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ.
ಹಳ್ಳಿಗಳ ಅಭಿವೃದ್ಧಿ ಮತ್ತು ಬಡವರ ಕೆಲಸದ ಹಕ್ಕಿಗಾಗಿ ನಮ್ಮ ಹೋರಾಟ ನಿರಂತರ.
ಈ ವೇಳೆ ಬೆಳಗಾವಿ ಜಿಲ್ಲಾ ಶಾಸಕರು, ಅಧ್ಯಕ್ಷರು, ಕಾಂಗ್ರೆಸ್ ಮುಖಂಡರು, ಯುವ ಮಿತ್ರರು ಉಪಸ್ಥಿತರಿದ್ದರು.
Laxmi News 24×7