ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆ: ಬೆಳಗಾವಿ ಸ್ಕೇಟರ್‌ಗಳ ಭರ್ಜರಿ ಸಾಧನೆ, 9 ಪದಕಗಳ ಬೇಟೆ
ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆ
ಬೆಳಗಾವಿ ಸ್ಕೇಟರ್‌ಗಳ ಭರ್ಜರಿ ಸಾಧನೆ
9 ಪದಕಗಳ ಬೇಟೆ
ವಿಶಾಖಪಟ್ಟಣಂನಲ್ಲಿ ನಡೆದ ಸ್ಪರ್ಧೆ
ವಿಶಾಖಪಟ್ಟಣಂನಲ್ಲಿ ಭಾರತೀಯ ರೋಲರ್ ಸ್ಕೇಟಿಂಗ್ ಮಹಾಸಂಘವು ಆಯೋಜಿಸಿದ್ದ 63ನೇ ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ಸ್ಕೇಟರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿ, 2 ಬೆಳ್ಳಿ ಹಾಗೂ 7 ಕಂಚು ಸೇರಿದಂತೆ ಒಟ್ಟು 9 ಪದಕಗಳನ್ನು ಗೆಲ್ಲುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ದೇಶದ ವಿವಿಧ ರಾಜ್ಯಗಳ 2500ಕ್ಕೂ ಹೆಚ್ಚು ಅಗ್ರಮಾನ್ಯ ಕ್ರೀಡಾಪಟುಗಳು ಭಾಗವಹಿಸಿದ್ದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಬೆಳಗಾವಿಯ ಪ್ರತಿಭೆಗಳು ತಮ್ಮ ಅದ್ಭುತ ಕೌಶಲ ಮೆರೆದಿದ್ದಾರೆ.
ಅವನೀಶ್ ಕೋರಿಶೆಟ್ಟಿ: 1 ಬೆಳ್ಳಿ ಪದಕ, ಸಯಿ ಪಾಟೀಲ್: 1 ಬೆಳ್ಳಿ ಹಾಗೂ 1 ಕಂಚಿನ ಪದಕ, ತೀರ್ಥ ಪಾಶ್ಚಾಪುರ: 2 ಕಂಚಿನ ಪದಕ, ಖುಷಿ ಘೋಟಿವೇಕರ್: 1 ಕಂಚಿನ ಪದಕ, ಶೆಫಾಲಿ ಶಂಕರಗೌಡ: 1 ಕಂಚಿನ ಪದಕ, ಸೋಮಯ್ಯ ಮಂಟೂರ್: 1 ಕಂಚಿನ ಪದಕ ಮತ್ತು ಐಶ್ವರ್ಯ ಸಂಪಗಾವಿ: 1 ಕಂಚಿನ ಪದಕ ಪಡೆದಿದ್ದಾರೆ.
ಈ ಕ್ರೀಡಾಪಟುಗಳು ಕೆಎಲ್‌ಇ ಸಂಸ್ಥೆಯ ಸ್ಕೇಟಿಂಗ್ ರಿಂಕ್ ಹಾಗೂ ಗುಡ್ ಶೆಫರ್ಡ್ ಸ್ಕೇಟಿಂಗ್ ರಿಂಕ್‌ನಲ್ಲಿ ತರಬೇತುದಾರರಾದ ಸೂರ್ಯಕಾಂತ್ ಹಿಂಡಲಗೇಕರ್, ವಿಠ್ಠಲ್ ಗಂಗಣೆ, ಯೋಗೇಶ್ ಕುಲಕರ್ಣಿ ಮತ್ತು ತಂಡದ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಕ್ರೀಡಾಪಟುಗಳ ಈ ಸಾಧನೆಗೆ ಡಾ. ಪ್ರಭಾಕರ್ ಕೋರೆ ಹಾಗೂ ಮಾಜಿ ಶಾಸಕ ಶ್ಯಾಮ್ ಘಾಟ್ಗೆ ಸೇರಿದಂತೆ ಹಲವು ಗಣ್ಯರು ಹರ್ಷ ವ್ಯಕ್ತಪಡಿಸಿ ಪ್ರೋತ್ಸಾಹಿಸಿದ್ದಾರೆ.
Laxmi News 24×7