ಬೆಳಗಾವಿ ಡಿಸಿ ವಿರುದ್ಧ ಸಂಸತ್ ಸಭಾಪತಿಗಳಿಗೆ ಧೈರ್ಯಶೀಲ್ ಮಾನೆ ದೂರು…
ಇದು ಕಳ್ಳರ ತಿರುಬೊಬ್ಬೆ ಎಂದ ಕನ್ನಡ ಹೋರಾಟಗಾರ ಅಶೋಕ್ ಚಂದರಗಿ
ಕರ್ನಾಟಕಕ್ಕೆ ಪ್ರವೇಶ ನೀಡದೇ ಸಂಸತ್ ಹಕ್ಕು ಭಂಗದ ಆರೋಪ
ಬೆಳಗಾವಿ ಡಿಸಿ ವಿರುದ್ಧ ಸಂಸತ್ ಸಭಾಪತಿಗಳಿಗೆ ಧೈರ್ಯಶೀಲ್ ಮಾನೆ ದೂರು
ಕ್ರಮಕೈಗೊಳ್ಳಬೇಕೆಂದು ಸಭಾಪತಿಗಳಿಗೆ ಮನವಿ
‘ಬೆಳಗಾವಿಯಲ್ಲಿ ನ.1ರಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿದ್ದ ಕರಾಳ ದಿನಾಚರಣೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದ ನನಗೆ ಬೆಳಗಾವಿ ಪ್ರವೇಶ ನಿಷೇಧಿಸಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಮಹಾರಾಷ್ಟ್ರದ ಹಾತಕಣಗಲೆ ಕ್ಷೇತ್ರದ ಸಂಸದ ಧೈರ್ಯಶೀಲ ಮಾನೆ ಅವರು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಗುರುವಾರ ದೂರು ನೀಡಿದ್ದಾರೆ.
‘ಪ್ರತಿವರ್ಷ ಎಂಇಎಸ್ನವರು ಮತ್ತು ಮರಾಠಿ ಭಾಷಿಕರು ಬೆಳಗಾವಿಯಲ್ಲಿ ಕರಾಳ ದಿನ ಆಚರಿಸುತ್ತಾರೆ. ನನಗೆ ಯಾವುದೇ ಅಪರಾಧಿಕ ಹಿನ್ನೆಲೆ ಇಲ್ಲ. ಆದರೂ, ಮೊಹಮ್ಮದ್ ರೋಷನ್ ಅಧಿಕಾರ ದುರ್ಬಳಕೆ ಮಾಡಿಕೊಂಡು ನಾನು ಬೆಳಗಾವಿಗೆ ಬರುವುದನ್ನು ತಡೆಹಿಡಿದಿದ್ದಾರೆ. ನನ್ನ ಹಕ್ಕು ಕಸಿದ ಅವರ ವಿರುದ್ಧ ಮಾನವ ಹಕ್ಕು ಉಲ್ಲಂಘನೆ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಇನ್ನು ‘ಭಾಷೆ ಮತ್ತು ಗಡಿ ವಿಷಯದಲ್ಲಿ ಮರಾಠಿಗರನ್ನು ಪ್ರಚೋದಿಸಲು ಧೈರ್ಯಶೀಲ ಮಾನೆ ಬೆಳಗಾವಿಗೆ ಬರುವುದನ್ನು ತಡೆದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕ್ರಮ ಸೂಕ್ತವಾಗಿದೆ. ಮಾನೆ ಅವರು ಲೋಕಸಭಾ ಸ್ಪೀಕರ್ಗೆ ದೂರು ನೀಡಿದ್ದು ಖಂಡನೀಯ’. ಜಿಲ್ಲೆಯ ಸಂಸದರು, ರಾಜ್ಯದ ಸಂಸತ್ ಸದಸ್ಯರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪರಿಸ್ಥಿತಿಯನ್ನು ಅವಲೋಕಿಸಿ ಕೊಡಬೇಕು. ಒಂದು ವೇಳೆ ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರ ವಿರುದ್ಧ ಕ್ರಮವಾಗದೇ, ಉಗ್ರ ಹೋರಾಟ ಮಾಡಬೇಕಾಗುತ್ತದೆಂದು ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಎಚ್ಚರಿಕೆಯನ್ನು ನೀಡಿದ್ದಾರೆ.
Laxmi News 24×7