ಹುಬ್ಬಳ್ಳಿ:ಹುಬ್ಬಳ್ಳಿಯ ವ್ಯಕ್ತಿಯೊಬ್ಬರು ತನ್ನ ಕುಟುಂಬವನ್ನು ಬಿಟ್ಟು ದುಬೈಗೆಂದು ದುಡಿಯಲು ಹೋಗಿದ್ದರು. ಸ್ವಲ್ಪ ದಿನಗಳ ಮಟ್ಟಿಗೆ ರಜೆ ಹಾಕಿ ತನ್ನ ಹುಟ್ಟೂರು ಅಂದ್ರೆ ಹುಬ್ಬಳ್ಳಿಗೆ ಬರುತ್ತಿದ್ದರು. ಬರುವಾಗ ತನ್ನ ಸ್ನೇಹಿತರ ಜೊತೆ ಸೌದಿ ಅರೇಬಿಯಾದ ಮೆಕ್ಕಾಗೆ ಹೋಗುವಾಗ,
ಬಸ್ ನಲ್ಲಿದ್ದ 42 ಜನರು ಸಜೀವ ದಹನವಾಗಿ ದಾರುಣ ಮರಣ ಹೊಂದಿದ್ದಾರೆ. ಅದರಲ್ಲಿ ಹುಬ್ಬಳ್ಳಿಯ ಗಣೇಶಪೇಟಗ್ ನಿವಾಸಿ ಅಬ್ದುಲ್ ಗನಿ ಶಿರಹಟ್ಟಿ ಕೂಡ ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿಯಲ್ಲಿ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಹೌದು, ಅಬ್ದುಲ್ ಗನಿ ಶಿರಹಟ್ಟಿ ಸುಮಾರು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಹೈದರಾಬಾದ್ ದಿಂದ ಅವರ ಸ್ನೇಹಿತರು ಮೆಕ್ಕಾಗೆ ಹೋಗಿ ಬರೋಣ ಎಂದು ಹೇಳಿದ್ದಾರೆ. ಆಗ ಅಬ್ದುಲ್ ಕೂಡ ದುಬೈಯಿಂದ ಹೋಗಿದ್ದಾರೆ. ಎಲ್ಲರೂ ಸೇರಿ ಪವಿತ್ರ ಮೆಕ್ಕಾ ಉಮ್ರಾ ಯಾತ್ರೆ ಮಾಡಲು ಸೌದಿ ಅರೇಬಿಯಾಕ್ಕೆ ತೆರಳಿದ್ದಾಗ 42 ಮಂದಿ ಭಾರತೀಯರಿದ್ದ ಬಸ್ ಪೆಟ್ರೋಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಎಲ್ಲರೂ ಸಜೀವ ದಹನವಾಗಿದ್ದಾರೆ.
ಅಬ್ದುಲ್ ಅವರು ಹೆಂಡ್ತಿ ನಾಲ್ಕು ಮಕ್ಕಳ್ಳನ್ನು ಅಗಲಿದ್ದಾರೆ. ಅವರ ಮನೆಗೆ ಶಾಸಕರು ಪ್ರಸಾದ ಅಬ್ಬಯ್ಯ ಅವರು ಭೇಟಿನಿಧಿ ಕುಟುಂಬಕ್ಕೆ ಶಾಂತ್ವನ ಹೇಳಿದ್ದಾರೆ.
Laxmi News 24×7