ಫಾದರ್ ಎಡ್ಡಿ ಮೆಮೋರಿಯಲ್ ಇಂಟರ್ ಸ್ಕೂಲ್ ನಾಕ್’ಔಟ್ ಫೂಟ್’ಬಾಲ್ ಟೂರ್ನಾಮೆಂಟ್’ಗೆ ಇಂದಿನಿಂದ ಚಾಲನೆ
ಫಾದರ್ ಎಡ್ಡಿ ಮೆಮೋರಿಯಲ್
ಇಂಟರ್ ಸ್ಕೂಲ್ ನಾಕ್’ಔಟ್ ಫೂಟ್’ಬಾಲ್ ಟೂರ್ನಾಮೆಂಟ್
ಸುಮುಖ್- ನಾಗೇಶ್ ಛಾಬ್ರಿಯಾ ಅವರಿಂದ ಚಾಲನೆ
ವಿವಿಧ ಶಾಲಾ ತಂಡಗಳ ಅತ್ಯುತ್ತಮ ಪ್ರದರ್ಶನ
ಬೆಳಗಾವಿಯ ಪ್ರತಿಷ್ಠಿತ ಫೂಟ್’ಬಾಲ್ ಟೂರ್ನಾಮೆಂಟ್ ಎಂದೇ ಪ್ರಸಿದ್ಧವಾದ ಫಾದರ್ ಎಡ್ಡಿ ಮೆಮೋರಿಯಲ್ ಇಂಟರ್ ಸ್ಕೂಲ್ ನಾಕ್’ಔಟ್ ಫೂಟ್’ಬಾಲ್ ಟೂರ್ನಾಮೆಂಟ್’ಗೆ ಇಂದಿನಿಂದ ಚಾಲನೆ ದೊರೆತಿದೆ.
ಬಿಗ್ ವೇಂಚರ್ಸ್, ಪ್ರಗತಿ ಇನಫೋಟೆಕ್, ದಿ ಎಕ್ಸ ಪೊಲೈಟ್ಸ್ ಅಸೋಸಿಯೇಷನ್ ಗೋವಾ ಸಹಯೋಗದಲ್ಲಿ ಮತ್ತು ನಿಶಾಸ ಇನ್’ಫಿನಿಟಿ ಪ್ರಾಯೋಜಕತ್ವದಲ್ಲಿ 57ನೇ ಫಾದರ್ ಎಡ್ಡಿ ಮೆಮೋರಿಯಲ್ ಇಂಟರ್ ಸ್ಕೂಲ್ ನಾಕ್’ಔಟ್ ಫೂಟ್’ಬಾಲ್ ಟೂರ್ನಾಮೆಂಟ್ 2025-26ನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಮೆಟ್ರೋಕಾಸ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡನ ಸಂಚಾಲಕರಾದ ನಾಗೇಶ್ ಛಾಬ್ರಿಯಾ, ಸುಮುಖ್ ಛಾಬ್ರಿಯಾ, ಫಾದರ್ ಅಲೆಂಡ್ರಾ ಡಿಕಾಸ್ಟೋ, ಫಾದರ್ ಸ್ಟೇವೆನ್ ಅಲಮೇಡಿಯಾ, ಫಾದರ್ ಮಾರಕೋನ್ ಬಾರೆಟ್ಟೋ, ಕ್ರಿಸ್ಟಾನ್ ಗೊನಸಾಲ್ವೆನ್ಸ್, ಪೋಲೈಟ್ಸ್’ನ ಅಧ್ಯಕ್ಷರಾದ ಡಾ. ಮಾಧವ್ ಪ್ರಭು ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು. ಮೊದಲಿಗೆ ನಾಗೇಶ್ ಛಾಬ್ರಿಯಾ, ಸುಮುಖ್ ಛಾಬ್ರಿಯಾ ಅವರಿಂದ ಕ್ರೀಡಾ ಧ್ವಜಾರೋಹನ ಮಾಡಿ ಪಂದ್ಯಾವಳಿಗೆ ಚಾಲನೆಯನ್ನು ನೀಡಲಾಯಿತು.
ಮೊದಲ ಪಂದ್ಯ ಬೆಳಗಾವಿಯ ಮರಾಠಿ ವಿದ್ಯಾನಿಕೇತನ ಮತ್ತು ಶೇಖ್ ಸೆಂಟ್ರಲ್ ಸ್ಕೂಲ್’ ತಂಡದ ನಡುವೆ ನಡೆಯಿತು.
ಈ ವೇಳೆ ಮಾತನಾಡಿದ ಮೆಟ್ರೋಕಾಸ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡನ ಸಂಚಾಲಕರಾದ ನಾಗೇಶ್ ಛಾಬ್ರಿಯಾ ಅವರು ಎಲ್ಲ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಎಂದರು.
ಈ ವೇಳೆ ಮಾತನಾಡಿದ ಸುಮುಖ್ ಛಾಬ್ರಿಯಾ ಅವರು, ಕಳೆದ ಬಾರಿ ಸೇಂಟ್ ಪಾಲ್ ಶಾಲೆಯ ಫೂಟ್’ಬಾಲ್ ತಂಡ ಸ್ಪರ್ಧೆಯಲ್ಲಿ ಕೊನೆಯ ಹಣಾಹಣಿಯಲ್ಲಿ ಜಯಗಳಿಸಿತ್ತು. ಈ ಬಾರಿಯೂ ಜಯಗಳಿಸಲಿ. ಪೋಲೈಟ್ಸ್ ಮತ್ತು ಮಾಧವಪ್ರಭು ಸೇರಿದಂತೆ ಸ್ಪರ್ಧೆಯ ಆಯೋಜಕರ ಕಾರ್ಯವನ್ನು ಪ್ರಶಂಸಿಸಿದರು. ಅಲ್ಲದೇ ತಮ್ಮ ತಾಯಿಯ ಹೆಸರಿನಲ್ಲಿ ಟ್ರೋಫಿ ನೀಡುತ್ತಿರುವುದು ಸಂತಸ ತಂದಿದೆ ಎಂದರು.
ಶಾಲೆಯ ಪ್ರಾಚಾರ್ಯರಾದ ಫಾದರ್ ಸಿಮೋನ್ ಫರ್ನಾಂಡೀಸ್ ಅವರು ದಿವಂಗತ ನಿಶಾ ಛಾಬ್ರಿಯಾ ಅವರು ಆದರ, ಪ್ರೇರಣೆ ಮತ್ತು ಕಾರ್ಯವನ್ನು ನೆನಪಿಸಿದರು. ಅವರು ಮಾಡಿದ ಕಾರ್ಯಗಳನ್ನು ಪ್ರಶಂಸಿಸಿದರು. ಇಂದು ಆಯೋಜಿಸಿರುವ ಈ ಫೂಟ್’ಬಾಲ್ ಟೂರ್ನಾಮೆಂಟ್ ಕೇವಲ ಒಂದು ಸ್ಪರ್ಧೆಯಾಗಿರದೇ, ರೆವರೆಂಡ್ ಫಾದರ್ ಎಡ್ಡಿಯವರಿಗೆ ಸಲ್ಲಿಸಿದ ಶ್ರದ್ಧಾಂಜಲಿಯಾಗಿದೆ. 50 ವರ್ಷಗಳಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು, ಇದು ವಿದ್ಯಾರ್ಥಿಗಳಲ್ಲಿ ಕ್ರೀಡಾಭಾವನೆಯನ್ನು ಬೆಳೆಸಲಿದೆ ಎಂದರು.
ಅಕ್ಟೋಬರ್ 31ಕ್ಕೆ ಅಂತಿಮ ಹಣಾಹಣಿ ನಡೆಯಲಿದೆ. ಇದರಲ್ಲಿ ವಿವಿಧ ಶಾಲೆಯ ತಂಡಗಳು ಭಾಗವಹಿಸಿವೆ.
Laxmi News 24×7