ರಾಯಚೂರು: ಚಾಕು ಇರಿದು ಮಹಿಳೆಯನ್ನು ಕೊಲೆಗೈದ ಘಟನೆಯೊಂದು ರಾಯಚೂರಿನ ಲಿಂಗಸಗೂರಿನ ಮುದಗಲ್ ಪಟ್ಟಣದ ವೆಂಕಟರಾಯಪೇಟೆಯಲ್ಲಿ ನಡೆದಿದೆ.
ನೇತ್ರಾವತಿ (33) ಕೊಲೆಯಾದ ಮಹಿಳೆ. ಸೋದರ ಸಂಬಂಧಿ ಶಿವರಾಜ್, ನೇತ್ರಾವತಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆಯ ಬಳಿಕ ಶಿವರಾಜ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಕೊಲೆಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7